ಸುಳ್ಯ: ನೆಟ್ಟಾರು ಮಣಿಕ್ಕಾರ ರಸ್ತೆಯಲ್ಲಿ ವಿದ್ಯುತ್ ಲೈನಿಗೆ ಮರಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದ ಘಟನೆ ಸೋಮವಾರ ನಡೆದಿದೆ.
11 ಕೆ.ವಿ.ಫೀಡರ್‌ನ 5 ಕಂಬಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಬೆಳ್ಳಾರೆ ನೆಟ್ಟಾರು ಕಡೆಗಳಲ್ಲಿ ಕೆಲಹೊತ್ತು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಬೆಳ್ಳಾರೆ ಮೆಸ್ಕಾಂ ಜೆ.ಇ.ಪ್ರಸಾದ್ ಹಾಗೂ ಲೈನ್‌ಮನ್‌ಗಳು ಕೂಡಲೇ ಸ್ಥಳಕ್ಕೆ ಬಂದು ರಸ್ತೆಯಿಂದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.