ಕುಂದಾಪುರ: ನಿಷೇಧಿತ ಮಾದಕ ವಸ್ತು ಎಂಡಿಎಂಎ ಪೌಡರ್ ಮಾರಾಟಕ್ಕೆ ಯತ್ನಿಸಿದ ಐದು ಮಂದಿಯನ್ನು ಮಾದಕ ವಸ್ತು ಎಂಡಿಎಂಎ ಸಹಿತ ಸೆನ್ ಅಪರಾಧ ದಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಟ್ಕಳ ಮೂಲದ ಅಬ್ರಾರ್ ಶೇಖ್ (22), ಮೊಹಮ್ಮದ್ ಇಸ್ಮಾಯಿಲ್ ಫರ್ಹಾನ್(25), ಮೊಹಮ್ಮದ್ ಜಿಯಾಮ್ ಬೆಳ್ಳಿ (26), ನೌಮನ್(27) ಹೊನ್ನಾವರ ಕಾಸರಕೋಡು ಮೂಲದ ಸಜ್ಜಾದ್ ಮುಸ್ತಕೀಮ್ ಕೆವಾಕ(21) ಬಂಧಿತರು.
ಮರವಂತೆ ಬೀಚ್ ಸಮೀಪ ಕೆಲವರು ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಪೌಡರ್‌ನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಕಾರ್ಯಾಚರಣೆಯಲ್ಲಿ 15. 59 ಮಿಲಿ ಗ್ರಾಂ ತೂಕದ 78 ಸಾವಿರ ರೂ. ಮೊತ್ತದ ಎಂಡಿಎಂಎ ಮಾದಕ ವಸ್ತು, ಆಪಾದಿತರು ಬಳಸಿದ್ದ 5 ಮೊಬೈಲ್, ಮಾದಕ ವಸ್ತು ಮಾರಾಟಕ್ಕೆ ಬಳಸಿದ ಕಾರು ಸಹಿತ 12.56ಲಕ್ಷ ರೂ ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.