ಕಲಬುರಗಿ: ವಿಕೃತ ಕಾಮುಕನನ್ನು ಕೊಚ್ಚಿ ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಲ್ಲಿನಾಥ್, ಪತ್ನಿ ನಾಗಮ್ಮ, ಬಸವರಾಜ್, ಹನುಮಂತ ಮತ್ತು ಗಾಂಧಾರಿಬಾಯಿ ಎಂದು ಗುರುತಿಸಲಾಗಿದೆ. ಆಳಂದ ತಾಲ್ಲೂಕಿನ ಹಿರೋಳ್ಳಿ ಗ್ರಾಮದ ನಾಗಪ್ಪ ವಾಡೇದ್ (40) ಎಂಬಾತನನ್ನು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಕರೆದೊಯ್ದು ಐವರು ಬರ್ಬರವಾಗಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಮಹಾರಾಷ್ಟ್ರದ ಸೊಲ್ಲಾಪುರದ ಅಕ್ಕಲಕೋಟೆಯ ತೋಟದಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆನ್ನಲಾಗಿದೆ. ಕೊಲೆಯಾದ ನಾಗಪ್ಪ ವಾಡೇದ್ ಹೆಂಡತಿ ಆರು ತಿಂಗಳ ಹಿಂದೆ ಸಾವನ್ನಪ್ಪಿದ್ದಳು. ಬಳಿಕ ವಾಡೇದ್ ವಿಕೃತ ಕಾಮಿಯಾಗಿದ್ದ. ಮತ್ತೊಂದು ಮದುವೆ ಮಾದುವುದಾಗಿ ಹುಡಿಗಿ ತೋರಿಸುತ್ತೇನೆಂದು ಆತನ ಸಂಬಂಧಿ ಮಹಿಳೆ ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿದ್ದಳು.
ಮಾರ್ಚ್ 29ರಂದು ಹುಡುಗಿಯನ್ನು ತೋರಿಸುವದಾಗಿ ಅಕ್ಕಲಕೋಟೆಗೆ ಗಾಂಧಾರಿಬಾಯಿ ಕರೆದುಕೊಂಡು ಹೋದಾಗ ಅಕ್ಕಲಕೋಟೆಯ ತೋಟದಲ್ಲಿ ಮೊದಲೇ ಹೊಂಚು ಹಾಕಿ ಕುಳಿತಿದ್ದ ಮಲ್ಲಿನಾಥ್, ಪತ್ನಿ ನಾಗಮ್ಮ, ಬಸವರಾಜ್ ಮತ್ತು ಹನುಮಂತ ಕತ್ತು ಕೊಯ್ದು ಕೊಲೆ ಮಾಡಿದ್ದರು.
ಕೊಲೆ ಬಳಿಕ ಮೃತದೇಹವನ್ನು ಚೀಲದಲ್ಲಿ ಹಾಕಿ ಬಾವಿಗೆ ಬಿಸಾಕೋಕೆ ಮುಂದಾಗಿದ್ದರು. ಆದರೆ, ಚೀಲದಲ್ಲಿ ಶವ ಹಿಡಿಯದೆ ಹೋದಾಗ ದೇಹವನ್ನು ಎರಡು ಭಾಗ ಮಾಡಿ ಮೂಟೆ ಕಟ್ಟಿ ಬಾವಿಗೆ ಎಸೆದಿದ್ದರು. ಇದೀಗ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಸಂಬಂಧ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)