ಉಳ್ಳಾಲ: ಮೀನುಗಾರಿಕೆ ನಡೆಸಿ ಲಂಗರು ಹಾಕಿದ್ದ ದೋಣಿ ಮುಳುಗಡೆಯಾಗಿ ಭಾಗಶಃ ಹಾನಿಗೀಡಾದ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಕೌಸರ್ ಜಬೀನಾ ಎಂಬವರಿಗೆ ಸೇರಿದ ಕೆ.ಜಬೀನಾ ಹೆಸರಿನ ಮೀನುಗಾರಿಕಾ ಪೈಬರ್ ದೋಣಿ ಮುಳುಗಡೆಯಾಗಿದೆ. ದೋಣಿ ಸಹಿತ ಅದರಲ್ಲಿದ್ದ ಎರಡು ಇಂಜಿನ್‌ಗಳು, ಬಲೆ, ಪೆಟ್ರೋಲ್, ಸೀಮೆಎಣ್ಣೆ, ಗ್ಯಾಸ್ ಸಿಲಿಂಡರ್, ಅಡುಗೆಗೆ ಬಳಸುವ ಪಾತ್ರೆಗಳು, ಕ್ಯಾನ್‌ಗಳು ಸಮುದ್ರ ಪಾಲಾಗಿದ್ದು, ಸುವಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.