ಜಿಲ್ಲೆ

ದೋಣಿಯಿಂದ ಬಿದ್ದು ಮೀನುಗಾರ ಸಾವು

ಇಂದಿರಾ ಎನ್ ಕೆ

ಪಡುಬಿದ್ರಿ: ಉದ್ಯಾವರ ಪಾಪನಾಶಿನಿ ನದಿಯಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಆಯತಪ್ಪಿ ನೀರಿಗೆ ಬಿದ್ದು ಮೀನುಗಾರ ಪಿತ್ರೋಡಿಯ ಗೋವರ್ಧನ್(62) ಎಂಬುವರು ಮೃತಪಟ್ಟಿದ್ದಾರೆ.

ಗೋವರ್ಧನ್ ಉದ್ಯಾವರದ ಲೀಲಾಧರ್ ಅವರ ನಾಡದೋಣಿಯಲ್ಲಿ 5 ವರ್ಷದಿಂದ ಮೀನುಗಾರಿಕೆ ಕೆಲಸ ಮಾಡುತ್ತಿದ್ದರು. ಬುಧವಾರ ಬೆಳಗ್ಗೆ ಪಾಪನಾಶಿನಿ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಗಾಳಿಯ ರಭಸಕ್ಕೆ ದೋಣಿ ಅಲುಗಾಡಿದಾಗ ಗೋವರ್ಧನ್ ಆಯತಪ್ಪಿ ನದಿಗೆ ಬಿದ್ದು ನೀರಿನಲ್ಲಿ ಮುಳುಗಿದ್ದರು. ಅವರಿಗೆ ಹುಡುಕಾಟ ನಡೆಸಲಾಗಿದ್ದು, ಬೆಳಗ್ಗೆ 8ಗಂಟೆ ವೇಳೆಗೆ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.