ಜಿಲ್ಲೆ

ಸಾಲದ ಬಾಧೆ ಮೀನುಗಾರ ಆತ್ಮಹತ್ಯೆ

ಕಾರವಾರ:ಸಾಲದ ಬಾಧೆಯಿಂದ ಮೀನುಗಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲಾದಲ್ಲಿ ನಡೆದಿದೆ. ಅಂಕೋಲಾದ ಮಂಜಗುಣಿಯ ಉಲ್ಲಾಸ ನಾಗೇಶ ತಾಂಡೇಲ(44) ಮೃತರು.
ಮಹಾಸತಿ ಮಹಾಲಸಾ ಪ್ರಸನ್ನ ಎಂಬ ಬೋಟ್‌ನ್ನು ಇವರು ಕುಟುಂಬದ ಸದಸ್ಯರ ಜತೆ ನಡೆಸಿಕೊಂಡು ಬರುತ್ತಿದ್ದರು. ಈ ವರ್ಷ ಮೀನು ಕಡಿಮೆ ಇರುವುದರಿಂದ ಸಾಲ ತೀರಿಸಲಾಗದೇ ಒತ್ತಡಕ್ಕೊಳಗಾಗಿದ್ದರು ಎನ್ನಲಾಗಿದೆ. ಇದರಿಂದ ಜ.31 ರಂದು ವಿಷ ಕುಡಿದ ಅವರನ್ನು ಅಂಕೋಲಾ ಹಾಗೂ ಕಾರವಾರದ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಗುರುವಾರ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಯಿಲೆಯಿಂದ ಆತ್ಮಹತ್ಯೆ
ಕಾಯಿಲೆಯಿಂದ ಬಳಲುತ್ತಿದ್ದ ಯವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ಯಲ್ಲಾಪುರದ ಶಿರನಾಲಾದ ಶಶಾಂಕ ಈಶ್ವರ ಪೂಜಾರಿ(22) ನೇಣು ಹಾಕಿಕೊಂಡಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.