ಜಿಲ್ಲೆ

ಕುಪ್ಪೆಪದವಿನಲ್ಲಿ ಸಮಾಲೋಚನಾ ಸಭೆ :ಶ್ರೀ ದುರ್ಗೇಶ್ವರಿ ಯಕ್ಷಕಲಾ ಕೇಂದ್ರದ ಪ್ರಥಮ ವಾರ್ಷಿಕೋತ್ಸವ

ಗುರುಪುರ: ಕುಪ್ಪೆಪದವಿನ ಶ್ರೀ ದುರ್ಗೇಶ್ವರಿ ಯಕ್ಷಗಾನ ಮಂಡಳಿ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಗುರು ರಾಕೇಶ್ ರೈ ಅಡ್ಕ ಸಾರಥ್ಯದ ಶ್ರೀ ದುರ್ಗೇಶ್ವರಿ ಯಕ್ಷಕಲಾ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ಕುರಿತು ಸಮಾಲೋಚನಾ ಸಭೆ ಕುಪ್ಪೆಪದವಿನಲ್ಲಿ ಭಾನುವಾರ ನಡೆಯಿತು.

ಕಟೀಲು ಮೇಳದ ಕಲಾವಿದ ಉಮೇಶ್ ಕುಪ್ಪೆಪದವು ಮಾತನಾಡಿ, ದುರ್ಗೇಶ್ವರಿ ಯಕ್ಷಗಾನ ಮಂಡಳಿ ಯಕ್ಷಗಾನ ಕ್ಷೇತ್ರಕ್ಕೆ ಪ್ರಬುದ್ಧ ಕಲಾವಿದರನ್ನು ನೀಡಿದೆ. ಇಲ್ಲಿನ ಬಹುತೇಕ ಕಲಾವಿದರು ವಿವಿಧ ಮೇಳಗಳಲ್ಲಿ ಮಿಂಚುತ್ತಿದ್ದಾರೆ. ನಾಟ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡುವಂತಾಗಲಿ ಎಂದರು.

ಯಕ್ಷಗಾನ ಕಲಾವಿದ ರಾಮಚಂದ್ರ ಸಾಲ್ಯಾನ್, ಉಪಾಧ್ಯಕ್ಷ ವಿನೋದ್ ಕುಮಾರ್ ಅಂಬೆಲೊಟ್ಟು, ಅಧ್ಯಕ್ಷ ವಿನಯ್ ಕಾರಂತ, ಪ್ರಮುಖರಾದ ಸೀತಾರಾಮ ಅಗರಿ, ಚಂದ್ರಶೇಖರ ತುಂಬೆಮಜಲು, ವಿಶ್ವನಾಥ ಪಂಜ, ಪ್ರಸಾದ್ ಸಾಲ್ಯಾನ್, ಲೋಕೇಶ್ ಚಂದ್ರಮಜಲು, ನಾರಾಯಣ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಕೋಶಾಧಿಕಾರಿ ಶಿವರಾಜ್ ನಾರ್ಲ ನಿರೂಪಿಸಿದರು. ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ವಂದಿಸಿದರು.