ಜಿಲ್ಲೆ

ದಿಢೀರ್​ ಎಂದು ಹೊತ್ತಿಕೊಂಡ ಬೆಂಕಿ; ಎರಡು ಅಂಗಡಿಗಳು ಭಸ್ಮ

ಆನೇಕಲ್​: ಗ್ಯಾರೇಜ್​ ಒಂದರಲ್ಲಿ ದಿಢೀರ್​ ಎಂದು ಬೆಂಕಿ ಕಾಣಿಸಿಕೊಂಡು ಎರಡು ಅಂಗಡಿಗಳು ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್​ ತಾಲ್ಲೂಕಿನ ಜಿಗಣಿ ಎಸಿಪಿ ವೃತ್ತದಲ್ಲಿ ನಡೆದಿದೆ.

ಗೋಪಿ ಎಂಬುವವರಿಗೆ ಸೇರಿದ್ದ ಗ್ಯಾರೇಜ್​ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಾರ್ಧದಲ್ಲೇ ಪಕ್ಕದ ಸ್ಟಿಕರ್ ಡಿಸೈನ್​​​ ಅಂಗಡಿಗೂ ವ್ಯಾಪಿಸಿದೆ. ಜನನಿಬಿಡ ಪ್ರದೇಶದಲ್ಲಿ ಆಗ್ನಿ ಆವರಿಸಿ ಸಾರ್ವಜನಿಕರಲ್ಲಿ ಕೆಲಕಾಲ ಆತಂಕವನ್ನು ಉಂಟು ಮಾಡಿತ್ತು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿರುವ ಅಗ್ನಿ ಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು ಅಂಗಡಿಯಲ್ಲಿದ್ದ ಬಹುತೇಕ ವಸ್ತುಗಳು ಅಗ್ನಿಗಾಹುತಿಯಾಗಿದೆ.