ಜಿಲ್ಲೆ

ಕರ್ತವ್ಯ ನಿರ್ವಹಿಸುವ ಠಾಣೆಯಲ್ಲೇ ಇನ್ಸ್​ಪೆಕ್ಟರ್​ ವಿರುದ್ಧ ಎಫ್​ಐಆರ್​ ದಾಖಲು..!

ಹುಬ್ಬಳ್ಳಿ: ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್​ ಠಾಣೆಯಲ್ಲೇ ಇನ್ಸ್​ಪೆಕ್ಟರ್​ ವಿರುದ್ಧ ದೂರು ದಾಖಲಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ನವನಗರ ನಿವಾಸಿ ಓಂಕಾರಗೌಡ ಪಾಟೀಲ ಪುತ್ರ ಗದಿಗೆಪ್ಪಗೌಡ ಲಂಡನ್ ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಮೇನಲ್ಲಿ ಗದಿಗೆಪ್ಪಗೌಡ ಸಾವನ್ನಪ್ಪಿದ ಬಳಿಕ ಗಂಡನ ಮನೆಗೆ ಬಂದ ಶಿವಲೀಲಾ, ಇನ್ಸ್‌ಪೆಕ್ಟರ್ ಜತೆ ಸೇರಿ ಬೆದರಿಕೆ ಹಾಕಿ ಚಿನ್ನಾಭರಣ ದೋಚಿದ್ದಾರೆ ಎಂದು ನ್ಯಾಯಾಲಯದ ಮೂಲಕ ಪ್ರಕರಣ ದಾಖಲಿಸಿದ್ದಾರೆ.

ಗದಿಗೆಪ್ಪಗೌಡ ಪತ್ನಿ ಶಿವಲೀಲಾ, ಸಂತೋಷ ಗುಡ್ಡಾಪುರಮಠ ಹಾಗೂ ನವನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಭು ಸೂರಿನ್ ವಿರುದ್ಧ ಪ್ರಕರಣ ದಾಖಲಾಗಿದೆ. ಓಂಕಾರ್ ಗೌಡ ನೀಡಿದ ದೂರಿನ ಆಧಾರ ಮೇಲೆ ಪ್ರಕರಣ ದಾಖಲಿಸಲಾಗಿದೆ. (ದಿಗ್ವಿಜಯ ನ್ಯೂಸ್​)