ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಂಗಳೂರಿಗೆ ಭೇಟಿ ನೀಡಿದ್ದು, ಇಂಫೆಟ್ರಿ ರಸ್ತೆಯಲ್ಲಿ ಆದಾಯ ತೆರಿಗೆ ಇಲಾಖೆಯ ನೂತನ ಕಟ್ಟಡದ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಿದರು. ಶಾಸ್ತ್ರೋಕ್ತವಾಗಿ ನೆರವೇರಿದ ಗುದ್ದಲಿಪೂಜೆಯಲ್ಲಿ ಸಚಿವರೊಂದಿಗೆ ಹಿರಿಯ ಐಟಿ ಅಧಿಕಾರಿಗಳು ಭಾಗವಹಿಸಿದರು.
ತದನಂತರ ಸುದ್ದಿಗಾರರು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮಾತನಾಡಿಸಲು ಹೋದಾಗ, ಅವರು ಕೇವಲ ಫೋಟೋಗೆ ಪೋಸ್ ಕೊಟ್ಟು ಹೊರಟೇಬಿಟ್ಟರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡಲು ನಿರಾಕರಿಸಿದ ಅವರು, ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಲು ಪತ್ರಕರ್ತರು ಗ್ಯಾಸ್, ಪೆಟ್ರೋಲ್ ಎಂದು ಕೂಗಿದ್ರೂ, ಕೇಳಿಸಿಕೊಳ್ಳದೇ ನಿರ್ಗಮಿಸಿದರು.