ಜಿಲ್ಲೆ

ಲೋಕ ಸಮರ 2024: ಕಡೆಗೂ ಅಂತ್ಯವಾಯ್ತು ಮುನಿಸು! 'ಕೈ' ಅಭ್ಯರ್ಥಿ ಪರ ಪ್ರಚಾರಕ್ಕಿಳಿದ ವೀಣಾ ಕಾಶಪ್ಪನವರ್

ಮೋಹನ್​ ಶೆಟ್ಟಿ

ಬಾಗಲಕೋಟೆ: ಕಳೆದ ಒಂದು ತಿಂಗಳಿನಿಂದ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದ ಲೋಕಸಭಾ ಟಿಕೆಟ್​ ವಂಚಿತೆ ವೀಣಾ ಕಾಶಪ್ಪನವರ್ ಇದೀಗ ಮುನಿಸನ್ನು ಬದಿಗಿಟ್ಟು, ಇಂದು ನಡೆದ ಕಾಂಗ್ರೆಸ್ ರೋಡ್ ಶೋನಲ್ಲಿ ಭಾಗಿಯಾಗಿದರು. ಇದು ಅನೇಕರಿಗೆ ಭಾರೀ ಅಚ್ಚರಿ ಮೂಡಿಸಿದ್ದು, ಬಾಗಲಕೋಟೆ ಲೋಕಸಭಾ ಚುನಾವಣೆಯ ಕೈ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪರ ಕಡೆಗೂ ಪ್ರಚಾರಕ್ಕೆ ದುಮುಕ್ಕಿದ್ದಾರೆ.

ಬಾಗಲಕೋಟೆಯಲ್ಲಿ ನಡೆದ ರೋಡ್ ಶೋನಲ್ಲಿ ಅಭ್ಯರ್ಥಿ ಪರ ಮತಯಾಚನೆ ಆರಂಭಿಸಿದ ವೀಣಾ, ಅಂಬೇಡ್ಕರ್ ವೃತ್ತದಲ್ಲಿ ಸಂಯುಕ್ತಾ ಜತೆಗೆ ಸೇರಿ ಕಾರ್ಯಕರ್ತರಿಗೆ ಕೈಬೀಸಿ ಮಾತನಾಡಿದರು. ಸಂಯುಕ್ತಾ ಜತೆ ಜತೆಯಲ್ಲೇ ನಡೆದ ವೀಣಾ ಇಬ್ಬರು ಒಟ್ಟಿಗೆ ಕೈ ಮೇಲಕೆತ್ತುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ದಂಪತಿ ಸಮೇತರಾಗಿ ರೋಡ್​ ಶೋನಲ್ಲಿ ಆಗಮಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವೀಣಾ ಕಾಶಪ್ಪನವರ್ ನಾವು ಪಕ್ಷದ ನಿಲುವಿಗೆ ಬದ್ಧರಾಗಿದ್ದೇವೆ ಎಂಬುದನ್ನು ಕಡೆಗೂ ಸಾಬೀತುಪಡಿಸಿದ್ದಾರೆ.

ರೋಡ್ ಶೋ ವೇಳೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಭರ್ಜರಿ ಡ್ಯಾನ್ಸ್ ಮಾಡಿದ್ದು, ಅವರನ್ನು ಕೈ ಕಾರ್ಯಕರ್ತರು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ವೀಣಾ ಕಾಶಪ್ಪನವರಗೆ ಜೈಕಾರ ಹಾಕಿ ಸಂಭ್ರಮಿಸಿದ ಕಾರ್ಯಕರ್ತರು, ಅಕ್ಕನಿಗೆ ಟಿಕೆಟ್ ಸಿಕ್ಕಿಲ್ಲ ಎಂಬುದನ್ನು ಮರೆತು ಇದೀಗ ಪ್ರಚಾರದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ.