ಕುಂದಾಪುರ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯ ಮಾನವೀಯತೆ ಮೇಲಿನ ದಾಳಿ. ದೇಶದ ಐಕ್ಯತೆ ಒಡೆಯಲು ಯತ್ನಿಸುವವರ ವಿರುದ್ಧ ಪಕ್ಷಾತೀತವಾಗಿ ಒಂದಾಗಬೇಕು ಎಂದು ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಕುಂದಾಪುರದ ಸಿಪಿಎಂ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಖಂಡನೆ ಹಾಗೂ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಸಿಪಿಎಂ ತಾಲೂಕು ಕಾರ್ಯದರ್ಶಿ ಚಂದ್ರಶೇಖರ ವಿ., ತಾಲೂಕು ಸಮಿತಿ ಸದಸ್ಯರಾದ ಸಂತೋಷ್ ಹೆಮ್ಮಾಡಿ, ಚಿಕ್ಕ ಮೊಗವೀರ, ಅಣ್ಣಪ್ಪ ಅಬ್ಬಿಗುಡ್ಡಿ, ರೆಹಮಾನ್, ಅನಂತ ಕುಲಾಲ್, ಸುಧೀರ್, ಕೃಷ್ಣ ಪೂಜಾರಿ ಇದ್ದರು.