Fist hand power logo. Protest strong fist raised fight icon, rebel illustration 
ಜಿಲ್ಲೆ

ಉಗ್ರ ಹೋರಾಟ ಎಚ್ಚರಿಕೆ

ಇಂದಿರಾ ಎನ್ ಕೆ

ಕಾರ್ಕಳ: ನಮ್ಮ ಸಮಾಜದ ಹೆಣ್ಣು ಮಗಳ ಮೇಲೆ ಆಗಿರುವ ಹೀನಾಯ ಕೃತ್ಯವನ್ನು ಭೋವಿ ಸಮುದಾಯ ಖಂಡಿಸುತ್ತಿದ್ದು, ಅತ್ಯಾಚಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಸಮಾಜದ ಮೂಲಕ ಉಗ್ರ ಹೋರಾಟ ನಡೆಸುವುದಾಗಿ ಜಿಲ್ಲಾ ಭೋವಿ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಶಿವಕುಮಾರ್ ಎಚ್ಚರಿಕೆ ನೀಡಿದರು.

ಜೀವನಾಂಶಕ್ಕಾಗಿ ಬೇರೆಡೆಯಿಂದ ಈ ಊರಿಗೆ ಬಂದ ನಮ್ಮ ಸಮಾಜ. ಹಿಂದುಳಿದ ಸಮಾಜದ ಮೇಲೆ ಇಂತಹ ನೀಚ ಕೃತ್ಯ ನಡೆಯುತ್ತಿರುವುದು ಖಂಡನೀಯ, ಡ್ರಗ್ಸ್ ಮಾಫಿಯಾ ಇಂತಹ ಕೃತ್ಯ ಕಾರ್ಯಗಳಿಗೆ ಮೂಲ ಕಾರಣ. ಡ್ರಗ್ಸ್ ವ್ಯಾಪಕವಾಗಿ ತಾಲೂಕಾದ್ಯಂತ ಪಸರಿಸಿದ್ದು ಅದನ್ನು ಪೊಲೀಸ್ ಇಲಾಖೆ ಹಾಗೂ ಸರ್ಕಾರ ಮಟ್ಟ ಹಾಕಬೇಕಾಗಿದೆ. ಅಲ್ಲದೆ ಜಾಲದ ಹಿಂದೆ ಇರುವ ಎಲ್ಲರನ್ನು ಕಾನೂನು ಮೂಲಕ ಶಿಕ್ಷಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಜಗದೀಶ್, ಆನಂದ, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.