ತೇರದಾಳ ಸಮೀಪದ ಹಳಿಂಗಳಿ ಗ್ರಾಮದ ಅಲ್ಲಮಪ್ರಭು ಪ್ರಾಥಮಿಕ ಶಾಲೆಯಲ್ಲಿ ನಾಗಪಂಚಮಿ ಅಂಗವಾಗಿ ಸರಸ್ವತಿ ಭಾವಚಿತ್ರ ಪೂಜೆ ನಡೆಯಿತು. ಮಹಾವೀರ ಶ್ರೀಗಳು, ಅಮರ ಹನಗಂಡಿ, ಮುಖ್ಯಶಿಕ್ಷಕಿ ಸಾವಿತ್ರಿ ಹನಗಂಡಿ, ಲಕ್ಷ್ಮೀ ಹನಗಂಡಿ ಇದ್ದರು. 
ಜಿಲ್ಲೆ

ಬಾಂಧವ್ಯ ಬೆಸೆಯುವ ಹಬ್ಬ

ಗಿರೀಶ ಸಗರ

ತೇರದಾಳ: ಪಂಚಮಿ ಹಬ್ಬವು ಧಾರ್ಮಿಕ ನಂಬುಗೆ ಜತೆಗೆ ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ. ನಾಗದೇವತೆ ಆರಾಧನೆಯೊಂದಿಗೆ ನಿಸರ್ಗದ ಪ್ರಾಣಿಪಕ್ಷಿ ಸಂಕುಲವನ್ನು ಆರಾಧಿಸುವ ಮೂಲಕ ಪರಿಸರವನ್ನು ಪ್ರೀತಿಸಿ ಪೋಷಿಸುವ ವೈಜ್ಞಾನಿಕ ಸತ್ಯ ಈ ಹಬ್ಬದಲ್ಲಿ ಅಡಗಿದೆ ಎಂದು ಮಹಾವೀರ ಪ್ರಭು ಹೇಳಿದರು.

ಸಮೀಪದ ಹಳಿಂಗಳಿ ಗ್ರಾಮದ ಅಲ್ಲಮಪ್ರಭು ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಾಗಪಂಚಮಿ ನಿಮಿತ್ತ ಹಮ್ಮಿಕೊಂಡ ಸರಸ್ವತಿ ಪೂಜೆ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇಂದು ಧರ್ಮದ ಹೆಸರಿನಲ್ಲಿ ನಡೆಯುವ ತಾರತಮ್ಯ ಮನೋಭಾವ ತೊಡೆದುಹಾಕಿ ಭಾರತೀಯರು ನಾವೆಲ್ಲರೂ ಒಂದೇ ಎಂಬ ವಿಶ್ವಕುಟುಂಬ ಭಾವವನ್ನು ನಮ್ಮ ಹಬ್ಬಗಳು ಪ್ರಚುರ ಪಡಿಸುತ್ತವೆ ಎಂದರು.

ಮುಖ್ಯಶಿಕ್ಷಕಿ ಸಾವಿತ್ರಿ ಹನಗಂಡಿ ಪೂಜೆ ನೆರವೇರಿಸಿದರು. ಆಡಳಿತಾಧಿಕಾರಿ ಅಮರ ಹನಗಂಡಿ, ಲಕ್ಷ್ಮೀ ಹನಗಂಡಿ, ಶಿಕ್ಷಕಿಯರಾದ ರಂಜೀತಾ ಬುದ್ನಿ, ರೇಷ್ಮಾ ನವಲ, ಆಫ್ರೀನಾ ಅಲಾಸ್ ಇದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.