ಜಿಲ್ಲೆ

ಬಾವಿಗೆ ಬಿದ್ದು ಮನೆ ಮಾಲೀಕ ಮೃತ್ಯು, ಪೈಪ್ ಅಳವಡಿಕೆ ಸಂದರ್ಭ ದುರಂತ

ಇಂದಿರಾ ಎನ್ ಕೆ

ಕಾಸರಗೋಡು: ಬಾವಿಯ ಆವರಣಗೋಡೆಯಲ್ಲಿ ನಿಂತು ಪೈಪ್ ಅಳವಡಿಸುವ ಮಧ್ಯೆ ಆಯತಪ್ಪಿ ಬಿದ್ದು, ಮನೆ ಮಾಲೀಕ ಮೃತಪಟ್ಟಿದ್ದಾರೆ. ವರ್ಕಾಡಿ ಕೊಡ್ಲಮೊಗರು ಬಂಡಾಸಾಲೆ ನಿವಾಸಿ, ಪ್ರಸಕ್ತ ಮಂಗಳೂರಿನ ಕೊಟ್ಟಾರದಲ್ಲಿ ವಾಸಿಸುತ್ತಿರುವ ರಾಜೇಂದ್ರ ಶೆಟ್ಟಿ(54)ಮೃತಪಟ್ಟವರು.

ಕೊಡ್ಲಮೊಗರಿನ ತಮ್ಮ ಮನೆಯನ್ನು ಬಾಡಿಗೆ ನೀಡಿದ್ದು, ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಶುಕ್ರವಾರ ಆಗಮಿಸಿದ್ದರು. ಈ ಮಧ್ಯೆ ಬಾವಿಗೆ ಪೈಪ್ ಅಳವಡಿಸುವ ಮಧ್ಯೆ ಆಯತಪ್ಪಿ ಬಿದ್ದು, ತಲೆಗೆ ಗಂಭೀರ ಗಾಯಗಳುಂಟಾಗಿತ್ತು. ತಕ್ಷಣ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಬಿಜೆಪಿ ಕಾರ್ಯಕರ್ತರಾಗಿದ್ದ ಅವರು, ಈ ಹಿಂದೆ ವರ್ಕಾಡಿ ಸುಂಕದಕಟ್ಟೆಯಲ್ಲಿ ಜೀಪ್ ಚಾಲಕರಾಗಿ ದುಡಿಯುತ್ತಿದ್ದರು. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.