ಜಿಲ್ಲೆ

ಮಾರ್ಚ್ 4 ರಂದು ಶ್ರೀ ರಾಮ ಶಿಲ್ಪಿ ಅರುಣ ಯೋಗಿರಾಜ್ ಗೆ ಸನ್ಮಾನ

Uttara Kannada - Subash Hegde

ಕಾರವಾರ: ಮಾರ್ಚ್ 4 ರಂದು ಬೆಳಗ್ಗೆ 10.30ಕ್ಕೆ ನಗರದ ಕೋಡಿಬಾಗದ ಸಾಗರ ದರ್ಶನ ಹಾಲ್ ನಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಅಭಿನಂದನೆ, ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.
ಡಾ.ಹಿರೇಮಠ ಫೌಂಡೇಶನ್, ಹಾಗೂ ಸನಾತನ ಧರ್ಮ ರಕ್ಷಣಾ ವೇದಿಕೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷ ಡಾ.ಗಜೇಂದ್ರ ನಾಯ್ಕ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಸಿದರು.
ಅಯೋಧ್ಯೆ ರಾಮ ಮಂದಿರದ ರಾಮ ಲಲ್ಲಾ ಮೂರ್ತಿ ಕೆತ್ತಿದ ಅರುಣ ಯೋಗರಾಜ್ ಅವರಿಗೆ ಕಾರ್ಯಕ್ರಮದಲ್ಲಿ ಅಭಿನವ ಅಮರಶಿಲ್ಪಿ ಎಂಬ ಬಿರುದು ನೀಡಿ ಗೌರವಿಸಲಾಗುವುದು. ಹಾಗೂ ಇದೇ ಕಾರ್ಯಕ್ರಮದಲ್ಲಿ ಜಿಲ್ಲೆಯ 200 ಕ್ಕೂ ಅಧಿಕ ಧಾರ್ಮಿಕ ಮುಖಂಡರನ್ನು ಸನ್ಮಾನಿಸಲಾಗುವುದು. ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ‌ ಮುತಾಲಿಕ್ ದಿಕ್ಸೂಚಿ ಭಾಷಣ ಮಾಡುವರು. ಹಿರೇಮಠ ಫೌಂಡೇಶನ್ ಸಂಸ್ಥಾಪಕ ಡಾ.ವಿಶ್ವನಾಥ ಹಿರೇಮಠ ಪಾಲ್ಗೊಳ್ಳುವರು ಎಂದರು. ಸುಮಾರು 5 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಡಾ.ವಿಶ್ವನಾಥ ಹಿರೇಮಠ ಅವರು ದಾಂಡೇಲಿ ಮೂಲದವರು. ಅವರು ವೈದ್ಯಕೀಯ ವೃತ್ತಿಯ ಜತೆಗೆ ಜಿಲ್ಲೆಯಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯ ಮಾಡಿದ್ದಾರೆ ಎಂದರು.

ಹಿರೇಮಠ ಫೌಂಡೇಶನ್ ನ ಚೇತನಕುಮಾರ್, ಆದಿತ್ಯ ಗೋಪಾಲ್, ವೇದಿಕೆಯ ಶಂಕರ‌ ಗುನಗಿ, ಶರದ್ ಬಾಂದೇಕರ್, ಚಂದ್ರಕಾಂತ‌ ಹರಿಕಂತ್ರ, ದಿಲೀಪ ಗೋವೇಕರ್, ಪ್ರಕಾಶ ನಾಯ್ಕ, ಅಶೋಕ ರಾಣೆ, ಚಂದ್ರಕಾಂತ ನಾಯ್ಕ, ದಿನಕರ ನಾಗೇಕರ್, ಯಶೋದಾ‌ ಹೆಗಡೆ ಇದ್ದರು.