ಜಿಲ್ಲೆ

ಉಪವಾಸದಿಂದ ಮನಸ್ಸು, ದೇಹ ಶುದ್ಧ

ಇಂದಿರಾ ಎನ್ ಕೆ

ಕಾರ್ಕಳ: ರಂಜಾನ್ ತಿಂಗಳಲ್ಲಿ ಸಂಜೆ ಇಫ್ತಾರ್ ಸಮಯದಲ್ಲಿ ಉಪವಾಸ ವ್ರತಧಾರಿಯ ಎಲ್ಲ ಪ್ರಾರ್ಥನೆ, ಬೇಡಿಕೆಗಳನ್ನು ಅಲ್ಹಾನು ಸ್ವೀಕರಿಸುತ್ತಾನೆ. ಅದಲ್ಲದೆ ರಮಜಾನ್ ತಿಂಗಳ ಉಪವಾಸ ನಮ್ಮ ಮನಸ್ಸು, ದೇಹ ಶುದ್ಧಗೊಳಿಸುತ್ತದೆ ಎಂದು ಮುಸ್ಲಿಂ ಒಕ್ಕೂಟ ಘಟಕ ಅಧ್ಯಕ್ಷ ಅಶ್ಪಕ್ ಅಹಮದ್ ಹೇಳಿದರು.

ಬಂಗ್ಲೆಗುಡ್ಡೆ ನೂರ್ ಮಸೀದಿಯಲ್ಲಿ ಮುಸ್ಲಿಂ ಒಕ್ಕೂಟ ಕಾರ್ಕಳ ಘಟಕ ವತಿಯಿಂದ ಬೃಹತ್ ಇಫ್ತಾರ್ ಕೂಟ ಇತ್ತೀಚೆಗೆ ನಡೆಯಿತು. ಧರ್ಮಗುರು ಮೌಲಾನ ಅಬ್ದುಲ್ ಹಫೀಜ್ ರಂಜಾನ್ ಉಪವಾಸದ ಮಹತ್ವ ಆತ್ಮಶುದ್ಧಿ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ ಕುರಿತು ಪ್ರವಚನ ನೀಡಿದರು.

ಮುಸ್ಲಿಂ ಒಕ್ಕೂಟ ಘಟಕ ಕಾರ್ಯದರ್ಶಿ ಸೈಯದ್ ಅಬ್ಬಾಸ್, ನೂರ್ ಮಸೀದಿ ಧರ್ಮಗುರು ಜಾಫರ್ ಸಾಹೇಬ್, ಘಟಕ ಸದಸ್ಯರು ಉಪಸ್ಥಿತರಿದ್ದರು.