ಜಿಲ್ಲೆ

ಕುಪ್ಪೆಪದವಲ್ಲಿ ರೈತರ ಪ್ರತಿಭಟನೆ : 440ಕೆವಿ ವಿದ್ಯುತ್ ಯೋಜನೆಗೆ ವಿರೋಧ : ರಾಜ್ಯರೈತ ಸಂ - ಹಸಿರು ಸೇನೆ ನೇತೃತ್ವ

ಸೌಮ್ಯ ಆರ್

ಗುರುಪುರ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಹಿತ ರಾಜ್ಯದ ಇತರ ಜಿಲ್ಲೆಯ ಸಾವಿರಾರು ರೈತರು ಹೆಕ್ಟೇರುಗಟ್ಟಲೆ ಕಷಿಭೂಮಿ ಕಳೆದುಕೊಳ್ಳಬಹುದಾದ ಪಡುಬಿದ್ರಿ ನಂದಿಕೂರಿನಿಂದ ಕಾಸರಗೋಡು ಜಿಲ್ಲೆಗೆ ಹಾದು ಹೋಗುವ 440 ಕೆವಿ ವಿದ್ಯುತ್ ಪ್ರಸರಣ ವಾರ್ಗ ಯೋಜನೆ ವಿರುದ್ಧ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಕುಪ್ಪೆಪದವು ಜಂಕ್ಷನ್‌ನಲ್ಲಿ ಗುರುವಾರ ಬಹತ್ ಪ್ರತಿಭಟನಾ ಸಭೆ ನಡೆಸಿ, ಯೋಜನೆ ರದ್ದುಗೊಳಿಸುವಂತೆ ಆಗ್ರಹಿಸಿತು.

ಯೋಜನೆಯಿಂದ ಕಷಿ ಭೂಮಿ ಕಳೆದುಕೊಳ್ಳಬಹುದಾದ ಕಾರ್ಕಳ ಇನ್ನ ಗ್ರಾಮದ ಹೋರಾಟ ಸಮಿತಿ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನ ವಾತನಾಡಿ, ಪಡುಬಿದ್ರಿಯಿಂದ ಕಾಸರಗೋಡು ಮಧ್ಯೆ 115 ಕಿಮೀ ಅಂತರದಲ್ಲಿ ಈ ವಿದ್ಯುತ್ ವಾರ್ಗ ಹಾದು ಹೋಗಲಿದೆ. ವಿದ್ಯುತ್ ವಾರ್ಗದ ಅಕ್ಕಪಕ್ಕ ತಲಾ 50 ಮೀಟರ್ ಜಾಗ ಕಾರಿಡಾರ್ ಎಂದು ಖಾಲಿಯಾಗಲಿದೆ. ಇಷ್ಟೊಂದು ಭೂಮಿ ಕಬಳಿಸಲಿರುವ ಯೋಜನೆಗೆ ಜಾಗ ಬಿಟ್ಟುಕೊಟ್ಟಲ್ಲಿ, ಹಣ ಪಡೆದುಕೊಂಡವರು ಬೇರೆ ಮನೆ ವಾಡಿಕೊಳ್ಳಬಹುದು. ಆದರೆ ಇಲ್ಲಿ ವಿದ್ಯುತ್ ವಾರ್ಗದ ಎರಡೂ ಪಾರ್ಶ್ವದ ಜನವಸತಿ ಮತ್ತು ಅವರ ಮುಂದಿನ ಪೀಳಿಗೆ ನಿರಂತರ ಕಷ್ಟನಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯ ರೈತ ಸಂದ ಜಿಲ್ಲಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ ವಾತನಾಡಿ, ಜಿಲ್ಲೆಗೆ ನಿರಂತರ ಬಾಧೆ ಕೊಡಬಹುದಾದ ಯೋಜನೆ ಇದು. ಪಡುಬಿದ್ರಿಯಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಕುಸಿದಿರುವುದರಿಂದ ಕೇರಳಕ್ಕೆ ಸರಬರಾಜು ವಾಡುವ ಈ ಯೋಜನೆಯ ಭವಿಷ್ಯದ ಚಿಂತನೆ ಭಿನ್ನವಾಗಿದೆ. ಅದು ಏನೆಂಬುದು ರೈತರಿಗೆ ತಿಳಿಯಬೇಕು ಎಂದರು.

ವಿಟ್ಲ ಹೋರಾಟ ಸಮಿತಿಯ ರಾಜೀವ ಗೌಡ, ಜಿಲ್ಲಾ ರೈತ ಸಂದ ಗೌರವ ಸಲಹೆಗಾರ ಮುರುವ ಮಹಾಬಲ ಭಟ್, ರೈತ ಸಂದ ಬಂಟ್ವಾಳ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಏಳಿಂಜೆ ಹೋರಾಟ ಸಮಿತಿ ಅಧ್ಯಕ್ಷ ಸುಕೇಶ್‌ಚಂದ್ರ ಶೆಟ್ಟಿ ಏಳಿಂಜೆ ಅವರು ಯೋಜನೆ ವಿರುದ್ಧ ವಾತನಾಡಿದರು.

ಹಸಿರು ಸೇನೆಯ ಜಿಲ್ಲಾ ಸಂಟನಾ ಕಾರ್ಯದರ್ಶಿ ದಯಾನಂದ ಶೆಟ್ಟಿ ಕುಳವೂರು ಸ್ವಾಗತಿಸಿ, ನಿರೂಪಿಸಿದರು. ರಾಜ್ಯ ರೈತ ಸಂದ ಸಂಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬ್ಳ ಪ್ರಸ್ತಾವಿಸಿದರು. ಸಾವಾಜಿಕ ಕಾರ್ಯಕರ್ತ ರೋಶನ್ ಲೋಬೊ, ಕಷ್ಣಪ್ರಸಾದ ತಂತ್ರಿ ಎಡಪದವು, ವಾತಭೂಮಿ ಸಂಟನೆ ಮುಖಂಡ ಆಲ್ಪೋನ್ಸಾ ಡಿಸೋಜ ನಿಡ್ಡೋಡಿ, ಆಗಸ್ಟಿನ್ ರಾಡ್ರಿಗಸ್, ಜಿಲ್ಲೆಯ ವಿವಿಧ ಭಾಗದ ರೈತ ಮುಖಂಡರು, ಕಿಲೆಂಜಾರು ಮತ್ತು ಕುಳವೂರು ಗ್ರಾಮದ ಸಂತ್ರಸ್ತ ರೈತರು ಉಪಸ್ಥಿತರಿದ್ದರು.

ಹಸಿರು ಸೇನೆ ಜಿಲ್ಲಾ ಸಂಚಾಲಕ ಶೇಖ್ ಅಬ್ದುಲ್ ವಂದಿಸಿದರು. ಬಳಿಕ ಕುಪ್ಪೆಪದವು ಗ್ರಾಪಂ ಪಿಡಿಒ ಸವಿತಾ ಮಂದೋಲಿಕರ್ ಮತ್ತು ಮುತ್ತೂರು ಪಿಡಿಒ ಪ್ರಮೋದ್ ಎಸ್. ನಾಯ್ಕ ಮೂಲಕ ದ.ಕ ಜಿಲ್ಲಾಧಿಕಾರಿಗೆ ರೈತರ ಸಂದ ಮುಖಂಡರು ಮನವಿ ಹಸ್ತಾಂತರಿಸಿದರು.

ರೈತರ ಪ್ರಮುಖ ಬೇಡಿಕೆಗಳು

  • ಕಷಿ ಭೂಮಿಯಲ್ಲಿ ವಿದ್ಯುತ್ ವಾರ್ಗ ಹಾದು ಹೋಗುವಂತಿಲ್ಲ.
  • ರೈತ ಸಂಟನೆಗಳ ಭೂವಾಲೀಕರ ಸಭೆ ನಡೆಸಿ ವಾಹಿತಿ ನೀಡಬೇಕು. ಯೋಜನೆಗಳ ಕಾರ್ಯರೂಪಕ್ಕೆ ಶೇ. 80ರಷ್ಟು ರೈತರ ಒಪ್ಪಿಗೆ ಪಡೆದು ಕಂಪನಿಗೆ ಜಾಗ ನೀಡತಕ್ಕದ್ದು.
  • ರೈತರಿಗೆ ಹಣದ ಆಮಿಷವೊಡ್ಡುವುದು, ಸುಳ್ಳು ವಾಹಿತಿ ನೀಡುವುದು, ದಬ್ಬಾಳಿಕೆ ನಡೆಸುವುದು ನಿಲ್ಲಬೇಕು.
  • ಮೂರನೇ ವ್ಯಕ್ತಿಯ ಮೂಲಕ ಮನವೊಲಿಕೆ ಸಂದರ್ಭ ರೈತರಿಂದ ಹಲ್ಲೆ ನಡೆದರೆ ಅದಕ್ಕೆ ಕಂಪನಿಯೇ ಜವಾಬ್ದಾರರೆಂದು ಪರಿಗಣಿಸಿ ಎಫ್‌ಐಆರ್ ದಾಖಲಿಸಬೇಕು.
  • ಹೋರಾಟದಿಂದ ಆಗುವ ಕಷ್ಟನಷ್ಟಗಳಿಗೆ ಕಂಪನಿ ಜವಾಬ್ದಾರವಾಗಲಿದ್ದು, ಇಂತಹ ಸಂದರ್ಭ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು.