ಯಲಬುರ್ಗಾ: ರಾಜ್ಯ ಮತ್ತು ಕೇಂದ್ರ ಸರ್ಕಾರ ಅನೇಕ ಜನಪರ ಯೋಜನೆ ಜಾರಿಗೊಳಿಸಿವೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ಜಿ.ವೀರಾಪುರ, ವಜ್ರಬಂಡಿ, ಗೆದಗೇರಿ, ಮದ್ಲೂರು, ಲಗಳೂರು, ತಲ್ಲೂರು, ಕೋನಸಾಗರ, ಹುಲೇಗುಡ್ಡ, ಮಕ್ಕಳ್ಳಿ, ಸಾಲಭಾವಿ, ಚಿಕ್ಕಬನ್ನಿಗೋಳ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಧಾನಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ರೈತರು ಮತ್ತು ಜನಸಾಮಾನ್ಯರ ಶ್ರೆಯೋಭಿವೃದ್ಧಿ ಗಮನದಲ್ಲಿಟ್ಟುಕೊಂಡು ಸಿಎಂ ಬಸವರಾಜ ಬೊಮ್ಮಾಯಿ ಹಲವಾರು ಜನಪರ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಪ್ರಧಾನಿ ಮೋದಿ ಸರ್ಕಾರ ಕೂಡ ರೈತರಿಗಾಗಿ ವಿವಿಧ ಕಾಯಕ್ರಮ ಅನುಷ್ಠಾನಗೊಳಿಸಿದೆ. ನಾನು ಕ್ಷೇತ್ರಕ್ಕೆ ಶಕ್ತಿ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕಳೆದ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆ ಈಡೇರಿಸುವ ಕೆಲಸ ಮಾಡಲಾಗಿದೆ.
ಬಿಜೆಪಿ ಸರ್ವಜನಾಂಗದ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದರು. ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್, ಪ್ರಮುಖರಾದ ಶಿವಶಂಕರ ದೇಸಾಯಿ, ಸಿ.ಎಚ್.ಪಾಟೀಲ್, ಬಸಲಿಂಗಪ್ಪ ಭೂತೆ, ರತನ್ ದೇಸಾಯಿ, ಅರವಿಂದಗೌಡ ಪಾಟೀಲ್, ಶಿವಪ್ಪ ವಾದಿ, ಹನುಮಂತಪ್ಪ ಹನುಮಾಪುರ, ಶರಣಪ್ಪ ಈಳಿಗೇರ್, ಅಯ್ಯನಗೌಡ ಕೆಂಚಮ್ಮನವರ್, ರುದ್ರಪ್ಪ ನಡುಲಮನಿ, ನಾಗರಾಜ ನಾಯ್ಕ ಇತರರಿದ್ದರು.