ಬೀದರ್​ನಲ್ಲಿ ಮೋದಿ ಹವಾ: ಬಿಜೆಪಿ ಸಮಾವೇಶಕ್ಕೆ ಹರಿದು ಬರುತ್ತಿರುವ ಜನಸಾಗರ

PM modi Bidar
Published on

ಬೀದರ್: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದಿನಿಂದ ಪ್ರಧಾನಿ ಮೋದಿ ಬಿರುಸಿನ ಪ್ರಚಾರಕ್ಕೆ ಇಳಿದಿದ್ದಾರೆ. ಗಡಿ ಜಿಲ್ಲೆ ಬೀದರ್​ಗೆ ಆಗಮಿಸಿರುವ ಮೋದಿ ಇಂದು ಭರ್ಜರಿ ಪ್ರಚಾರ ನಡೆಸಲಿದ್ದು, ಮೋದಿ ಸಮಾವೇಶಕ್ಕೆ ಜನಸಾಗರವೇ ಹರಿದು ಬರುತ್ತಿದೆ.

ಬೀದರ್​ನ ಹುಮನಾಬಾದ್​ನಲ್ಲಿ ನಡೆಯಲ್ಲಿರುವ ಬಿಜೆಪಿ ಸಮಾವೇಶಕ್ಕೆ ಜಿಲ್ಲೆಯ ಮೂಲೆ ಮೂಲೆಗಳಿಂದ ಜನ ಸಾಗರ ಹರಿದು ಬರುತ್ತಿದೆ. ಮಹಿಳೆಯರು, ಮಕ್ಕಳು ಹಾಗೂ ಅಂಗವಿಕಲರೆನ್ನದೇ ಪ್ರಧಾನಿ ನರೇಂದ್ರ ಮೋದಿ ಭಾಷಣ ಕೇಳುವುದಕ್ಕೆ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ಹುಮನಾಬಾದ್ ಕ್ಷೇತ್ರದ ಚೀನಕೇರಾ ಕ್ರಾಸ್ ಬಳಿ ಸಮಾವೇಶ ನಡೆಯಲಿದೆ. ಮೋದಿ ಅಧ್ಯಕ್ಷತೆಯಲ್ಲಿ ಬೃಹತ್ ಬಿಜೆಪಿ ಸಮಾವೇಶ ನಡೆಯುತ್ತಿದ್ದು, ಸಾಕಷ್ಟು ಜನರು ಆಗಮಿಸುತ್ತಿದ್ದಾರೆ. ಸಮಾವೇಶದ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಇದೆ. 9 ಕ್ಷೇತ್ರಗಳಿಂದ ಮೋದಿ ಸಮಾವೇಶಕ್ಕೆ ಬೃಹತ್​ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದೆ. ಬಸವಣ್ಣನ ಕರ್ಮಭೂಮಿ ಬೀದರ್​ನಲ್ಲಿ ಮೋದಿ ಮತ ಬೇಟೆಗೆ ಇಳಿದಿದ್ದಾರೆ.

ಕಲ್ಯಾಣ ನಾಡಿನಲ್ಲಿ ಪ್ರಧಾನಿ ಮೋದಿ ಹವಾ

ಬೀದರ್ ವಾಯುನೇಲೆಯಿಂದ ಹುಮನಾಬಾದ ಚಿನ್ನಕೇರಾ ಕ್ರಾಸ್​ನ ಬಳಿ ನಡೆಯಲ್ಲಿರುವ ಸಮಾವೇಶದ ಸ್ಥಳಕ್ಕೆ ಮೂರು ಹೆಲಿಕಾಪ್ಟರ್ ಮೂಲಕ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿ.ಎಂ ಯಡಿಯೂರಪ್ಪ ಆಗಮಿಸಿದ್ದಾರೆ. ನೀರಿಕ್ಷೆಗೂ ಮೀರಿ ಜನರು ಸೇರಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net