ಸುಬ್ರಹ್ಮಣ್ಯ: ಕರ್ತವ್ಯದ ಬಗ್ಗೆ ಆಳವಾದ ಜ್ಞಾನ ಹೊಂದಿದ ಅಧಿಕಾರಿಗಳೊಂದಿಗೆ ಸೇವೆ ನೆರವೇರಿಸಲು ದೊರಕಿರುವುದು ಭಾಗ್ಯ. ಇವರ ಸಲಹೆ, ಮಾರ್ಗದರ್ಶನ ಆಡಳಿತ ವ್ಯವಸ್ಥೆಯಲ್ಲಿ ಉತ್ಕೃಷ್ಟವಾಗಿತ್ತು. ಶ್ರೀ ದೇವಳದ ಅವಳಿ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಸಾವಿರಾರು ಗ್ರಾಮೀಣ ಬಡ ವಿದ್ಯಾರ್ಥಿಗಳ ಅನುಕೂಲತೆಗಾಗಿ ಶುಲ್ಕ ಕಡಿತಗೊಳಿಸುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಪೂರಕವಾದ ಸಹಕಾರ ನೀಡಿದವರು ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯರ ಸೋಮಶೇಖರ ನಾಯಕ್ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾಗಿ, ಕಾಲೇಜಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಶುಕ್ರವಾರ ನಿವೃತ್ತರಾದ ಡಾ.ನಿಂಗಯ್ಯ ಅವರಿಗೆ ಶ್ರೀ ದೇವಳದ ಎಸ್‌ಎಸ್‌ಪಿಯು ಕಾಲೇಜಿನ ವತಿಯಿಂದ ಶನಿವಾರ ಬೀಳ್ಕೊಡುಗೆ ಮತ್ತು ಗೌರವಾರ್ಪಣಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಪುಷ್ಪಾರ್ಚನೆ ಮೂಲಕ ಸ್ವಾಗತ ಕೋರಿದರು. ಬಳಿಕ ಪ್ರಾಚಾರ್ಯ ಸೋಮಶೇಖರ ನಾಯಕ್ ಡಾ.ನಿಂಗಯ್ಯ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.
ಡಾ.ನಿಂಗಯ್ಯ ಅವರ ಪತ್ನಿ ನಾಗರತ್ನ, ಶ್ರೀ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಪ್ರೌಢಶಾಲಾ ಮುಖ್ಯಗುರು ಕೆ.ಯಶವಂತ ರೈ, ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಹಿರಿಯ ಉಪನ್ಯಾಸಕ ಎಂ.ಕೃಷ್ಣ ಭಟ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಹಿರಿಯ ಉಪನ್ಯಾಸಕರಾದ ಜಯಶ್ರೀ ವಿ.ದಂಬೆಕೋಡಿ, ಗಿರೀಶ್, ಜಯಪ್ರಕಾಶ್ ಆರ್., ಉಪನ್ಯಾಸಕರಾದ ಮನೋಜ್ ಕುಮಾರ್ ಬಿ.ಎಸ್., ಜ್ಯೋತಿ ಪಿ.ರೈ, ಯೋಗಣ್ಣ ಎಂ.ಎಸ್., ಸೌಮ್ಯಾ ದಿನೇಶ್, ಸುಧಾ, ಪೂರ್ಣಿಮಾ, ಸೌಮ್ಯಕೀರ್ತಿ , ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್., ಶ್ರೀ ದೇವಳದ ನಂದೀಶ್ ಕಟ್ರಮನೆ, ಕಾಲೇಜಿನ ಸಿಬ್ಬಂದಿ ಮಹೇಶ್ ಕುಮಾರ್ ಕೆ.ಎಚ್ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಸವಿತಾ ಕೈಲಾಸ್, ಪ್ರವೀಣ್ ಎರ್ಮಾಯಿಲ್, ಶ್ರೀಧರ್ ಪುತ್ರನ್, ಜಯಪ್ರಕಾಶ್.ಆರ್ ಶುಭ ಹಾರೈಸಿದರು. ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ಸ್ವಾಗತಿಸಿ, ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ನಿರೂಪಿಸಿ, ಶ್ರೀಧರ್ ಪುತ್ರನ್ ವಂದಿಸಿದರು.
ವಿದ್ಯೆ ಅನ್ನುವುದು ಬದುಕಿಗೆ ಅತ್ಯವಶ್ಯಕ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಬಡತನದ ಹಿನ್ನೆಲೆಯಿಂದ ಬಂದಿರುತ್ತಾರೆ.ಅಂಥವರು ವಿದ್ಯೆಯಿಂದ ವಂಚಿತರಾಗಬಾರದು. ಎಂಬ ನಿಟ್ಟಿನಲ್ಲಿ ಪ್ರಾಚಾರ್ಯರಲ್ಲಿ ಚರ್ಚಿಸಿ ಸಹಕಾರ ನೀಡಿದ್ದೇನೆ. ಮುಂದೆ ಜ್ಞಾನ ಸಂಪಾದನೆ ಮಾಡಿ ಭವಿಷ್ಯದಲ್ಲಿ ಶ್ರೇಷ್ಠತೆ ಸಂಪಾದಿಸಬೇಕು. ಆಗ ನಮ್ಮ ಪ್ರಯತ್ನ ಸಾಫಲ್ಯ ಸಾಧಿಸುತ್ತದೆ. ಮುಂದೆ ಕೆಲವು ಬೋಧಕ ಬೋಧಕೇತರರ ಭವಿಷ್ಯ ರೂಪಣೆ ಹೊಣೆ ಪ್ರಾಚಾರ್ಯರಿಗೆ ಒಪ್ಪಿಸಿ ತೆರಳುತ್ತಿದ್ದೇನೆ. ಸರ್ವರಿಗೂ ಒಳ್ಳೆಯದನ್ನು ಬಯಸುವ ಪ್ರಾಚಾರ್ಯರು ಈ ನಿಟ್ಟಿನಲ್ಲಿ ಶ್ರಮಿಸುತ್ತಾರೆ ಎಂದು ಸನ್ಮಾನ ಸ್ವೀಕರಿಸಿದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಹೇಳಿದರು.