ಸುಬ್ರಹ್ಮಣ್ಯ: ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಮುಖಿ ಸೇವೆಗೆ ಆಕರ್ಷಿತರಾಗಲು ರಾಷ್ಟ್ರೀಯ ಸೇವಾ ಯೋಜನೆ ಬುನಾದಿಯಾಗಿದೆ. ಹಲವಾರು ವಿದ್ಯಾರ್ಥಿಗಳು ಎನ್‌ಎಸ್‌ಎಸ್ ಮೂಲಕ ಸೇವೆ ನೆರವೇರಿಸಿ ಬದುಕಿನಲ್ಲಿ ಅಳವಡಿಸಿಕೊಂಡಿರುವುದು ಶ್ಲಾಘನೀಯ ಎಂದು ಎಸ್‌ಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎನ್‌ಎಸ್‌ಎಸ್ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿ ನಿರ್ಗಮಿಸಲಿರುವ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು. ಎನ್‌ಎಸ್‌ಎಸ್ ವಿದ್ಯಾರ್ಥಿ ನಾಯಕ ಪವನ್ ಕುಮಾರ್ ಮತ್ತು ವಿದ್ಯಾರ್ಥಿ ನಾಯಕಿ ಕಾವ್ಯಾ ಅವರನ್ನು ಸನ್ಮಾನಿಸಲಾಯಿತು. ಎನ್‌ಎಸ್‌ಎಸ್ ಸ್ವಯಂಸೇವಕರಾಗಿದ್ದು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ನಿತೀನ್ ಪಿ.ಎ, ಮೋಕ್ಷಿತಾ ಎ, ಪವನ್ ಕುಮಾರ್, ಸಾಕ್ಷಿ ಎನ್.ಎಂ, ಬಿಪಿನ್ ಕೆ, ಚಂದನ್ ಸಿ.ಎಸ್, ಹಿತೇಶ್ ಎ.ಕೆ ಅವರನ್ನು ಸನ್ಮಾನಿಸಲಾಯಿತು.
ಎನ್‌ಎಸ್‌ಎಸ್‌ನ ನಿರ್ಗಮಿತ ಯೋಜನಾಧಿಕಾರಿ ಸೌಮ್ಯಾ ದಿನೇಶ್, ಸಹಯೋಜನಾಧಿಕಾರಿ ಭವ್ಯಶ್ರೀ ಹರೀಶ್ ಕುಲ್ಕುಂದ, ಯೋಜನಾಧಿಕಾರಿ ಪೂರ್ಣಿಮಾ, ಸಾಂಸ್ಕೃತಿಕ ಸಂಘದ ಮಹೇಶ್ ಕೆ.ಎಚ್ ಇದ್ದರು. ಕಾವ್ಯಾ, ನಿತೀಶ್, ಪವನ್ ಕುಮಾರ್, ಮೋಕ್ಷಿತಾ, ಚಿನ್ಮಯಿ, ಮೌಲ್ಯಾ ಅನಿಸಿಕೆ ವ್ಯಕ್ತಪಡಿಸಿದರು. ಶ್ರೇಯಾ ಕೆ.ಎಸ್ ಪ್ರಾರ್ಥಿಸಿದರು. ಮೇಘನಾ ಎನ್.ಎಸ್ ಸ್ವಾಗತಿಸಿದರು. ಬ್ರಾಮರ್ ವಂದಿಸಿದರು.