ಉಮೇಶ್ ಕೆ.ಕಲ್ಕಡ್ತಿಮಾರು ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಮಾತನಾಡಿದರು. ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಸದಾನಂದ ಪೂಜಾರಿ, ಉಜಿರೆ ಮಹಿಳಾ ಐಟಿಐನ ಪ್ರಾಚಾರ್ಯ ಪ್ರಕಾಶ್ ಕಾಮತ್ ಹಾಗೂ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿನರಾಜ ಜೈನ್ ಇದ್ದರು. 
ಜಿಲ್ಲೆ

ಸಂಸ್ಥೆಯ ಏಳಿಗೆಗೆ ಶ್ರಮಿಸಿದ್ದ ಕಚೇರಿ ಅಧೀಕ್ಷಕ : ಬೀಳ್ಕೊಡುಗೆ ಸಮಾರಂಭದಲ್ಲಿ ವಿಶ್ವೇಶ್ವರ ಪ್ರಸಾದ್ ಕೆ.ಆರ್.ಹೇಳಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ವೇಣೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸುದೀರ್ಘ ೩೮ ವರ್ಷಗಳ ಕಾಲ ಸಾರ್ಥಕ ಸೇವೆಯನ್ನು ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಉಮೇಶ್ ಕೆ.ಕಲ್ಕಡ್ತಿಮಾರು ಅವರ ಬೀಳ್ಕೊಡುಗೆ ಸಮಾರಂಭ ಐಟಿಐಯಲ್ಲಿ ನಡೆಯಿತು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ.ಆರ್.ಮಾತನಾಡಿ, ನಿವೃತ್ತಿಕೊಳ್ಳುತ್ತಿರುವ ಉಮೇಶ್ ಕೆ.ಸುದೀರ್ಘ ೩೮ ವರ್ಷಗಳ ಸಂಸ್ಥೆಯ ಏಳಿಗೆಗೆ ಶ್ರಮಿಸಿ ಸರ್ವತೋಮುಖ ಅಭಿವೃದ್ಧಿಗೆ ಕಾರಣಿಕರ್ತರಾಗಿದ್ದಾರೆ ಎಂದರು.
ನಿವೃತ್ತ ಪ್ರಾಚಾರ್ಯ ಸದಾನಂದ ಪೂಜಾರಿ, ಉಜಿರೆ ಮಹಿಳಾ ಐಟಿಐನ ಪ್ರಾಚಾರ್ಯ ಪ್ರಕಾಶ್ ಕಾಮತ್ ಹಾಗೂ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿನರಾಜ ಜೈನ್ ಶುಭ ಹಾರೈಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆ, ಐಟಿಐ ಸಿಬ್ಬಂದಿ, ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಉಮೇಶ್ ಕೆ.-ಹೇಮಲತಾ ದಂಪತಿಯನ್ನು ಗೌರವಿಸಲಾಯಿತು.

ಸದಾನಂದ ಪೂಜಾರಿ, ಸಂಸ್ಥೆಯ ಹಿತೈಷಿ ಹಾಗೂ ಭಾರತೀಯ ಜೀವ ವಿಮಾ ನಿಗಮದ ಜಗನ್ನಾಥ ದೇವಾಡಿಗ, ಹರೀಶ್ ಶೆಟ್ಟಿ, ಎಸ್‌ಡಿಎಂ ಐಟಿಐ ಕಚೇರಿ ಸಿಬ್ಬಂದಿ ಶರಣ ಬಸಪ್ಪ ಹಿರೇಮಠ್ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು.

ಕಳೆದ ವರ್ಷ ಸಂಸ್ಥೆಯಿಂದ ನಿವೃತ್ತಿಯಾದ ಚಂದ್ರ ಕುಮಾರ್ ಹಾಗೂ ಸನತ್ ಕುಮಾರ್ ಜೈನ್ ಅವರನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಉಮೇಶ್ ಕೆ. ಅವರ ಪುತ್ರ ಹರ್ಷಿತ್ ಕುಮಾರ್, ಪುತ್ರಿ ಹಂಶಿತ ಹಾಗೂ ಭಾರತೀಯ ಜೀವ ವಿಮಾ ನಿಗಮದ ಅಧಿಕಾರಿ ಹರೀಶ್ ಶೆಟ್ಟಿ, ಸಂಸ್ಥೆಯ ಕಚೇರಿ ಸಿಬ್ಬಂದಿ ಫಣಿರಾಜ್ ಜೈನ್, ತರಬೇತಿ ಅಧಿಕಾರಿಗಳಾದ ಪೀಟರ್ ಸಿಕ್ವೆರಾ, ಸೇವಾ ನಿವೃತ್ತಿಗೊಳ್ಳುತ್ತಿರುವ ನಿವೃತ್ತ ತರಬೇತಿ ಅಧಿಕಾರಿ ಶಿವರಾವ್ ವಿ.ಉಪಸ್ಥಿತರಿದ್ದರು.

ಕಿರಿಯ ತರಬೇತಿ ಅಧಿಕಾರಿ ರತ್ನಾಕರ ರಾವ್ ಸ್ವಾಗತಿಸಿದರು. ಶ್ರೀ ಪದ್ಮಪ್ರಸಾದ್ ಬಸ್ತಿ ಕಾರ್ಯಕ್ರಮ ನಿರೂಪಿಸಿ ಶ್ರೀಧರ್ ಡಿ.ಸನ್ಮಾನ ಪತ್ರ ವಾಚಿಸಿದರು, ದಯಾನಂದ ಭಂಡಾರಿ ವಂದಿಸಿದರು.