ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ಪ್ರಾಥಮಿಕ ಆರೋಗ್ಯ ಕೇಂದ್ರ ಸಾಸ್ತಾನ ಗ್ರಾಪಂ ಐರೋಡಿ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಆಶ್ರಯದಲ್ಲಿ ಬಾಳ್ಕುದ್ರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-2025ನೇ ಸಾಲಿನ ದೃಷ್ಟಿ ಪ್ರದಾನ ಯೋಜನೆಯಡಿ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಉಚಿತ ಶಿಬಿರ ಇತ್ತೀಚೆಗೆ ನಡೆಯಿತು.
ರೋಟರಿ ಕ್ಲಬ್ ಸಹಾಯಕ ಗವರ್ನರ್ ರಾಘವೇಂದ್ರ ಎಂ.ಸಾಮಗ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ರೋಟರಿ ಸೇವೆ ಅತ್ಯಂತ ಮಹತ್ವದ್ದು, ಪೋಲಿಯೋ, ಅಂಧತ್ವ ನಿವಾರಣಾ, ಕಾಲರಾ, ಪ್ಲೇಗು ಇಂತಹ ಸಂದರ್ಭದಲ್ಲಿ ನಮ್ಮ ರೋಟರಿ ಇಂಟರ್‌ನ್ಯಾಷನಲ್ ಮನುಕುಲಕ್ಕೆ ದೊಡ್ಡ ಕೊಡುಗೆ ನೀಡಿದೆಯಲ್ಲದೆ ಕ್ಯಾಂಪ್ ಫಲಾನುಭವಿಗೆ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಕನ್ನಡಕ ನೀಡುದಾಗಿ ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಪೂಜಾರಿ, ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಚಂದ್ರ ನಾಯರಿ, ರೋಟರಿ ಸಂಸ್ಥೆ ಪ್ರಮುಖರಾದ ಕುಸುಮ ಮನೋಜ್, ಮನೋಜ್ ಕುಮಾರ್, ಗಣೇಶ್ ಜಿ., ಪಿ.ಸಿ.ಹೊಳ್ಳ ಉಪಸ್ಥಿತರಿದ್ದರು. ನಿಯೋಜಿತ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಸ್ವಾಗತಿಸಿ, ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಘವೇಂದ್ರ ರಾವ್ ಪ್ರಾಸ್ತಾವಿಕ ಮಾತನಾಡಿದರು.