ಯಲಬುರ್ಗಾದಲ್ಲಿ ಲಘು ರಥೋತ್ಸವಕ್ಕೆ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಪ್ರಮುಖರಾದ ಅಮರಪ್ಪ ಕಲಬುರ್ಗಿ, ಸಿದ್ರಾಮೇಶ ಬೇಲೇರಿ, ಕಳಕೇಶ ಅರಕೇರಿ, ಶರಣಪ್ಪ ಮಳಗಿ, ವಿರೂಪಾಕ್ಷಯ್ಯ ಹಿರೇಮಠ ಇದ್ದರು. 
ಜಿಲ್ಲೆ

ವಿಜೃಂಭಣೆಯಿಂದ ಜರುಗಿದ ಅಡ್ಡಪಲ್ಲಕಿ ಉತ್ಸವ

Kopala - Desk - Eraveni

ಯಲಬುರ್ಗಾ: ಶ್ರಾವಣಮಾಸದ ಕೊನೆಯ ಸೋಮವಾರ ನಿಮಿತ್ತ ಪಟ್ಟಣದ ಸಂಸ್ಥಾನ ಹಿರೇಮಠದಿಂದ ಅಡ್ಡಪಲ್ಲಕಿ ಉತ್ಸವ ಮತ್ತು ಲಘು ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ ಶ್ರೀಮಠದಲ್ಲಿ ಸಿದ್ಧರಾಮೇಶ್ವರ ಶಿವಾಚಾರ್ಯರ ಕತೃ ಗದ್ದುಗೆಗೆ ವಿಶೇಷ ಅಭಿಷೇಕ, ಪೂಜೆ ಸೇರಿ ನಾನಾ ಧಾರ್ಮಿಕ ಕೈಂಕರ್ಯಗಳು ನಡೆದವು. ಶ್ರೀಮಠದ ಆವರಣದಲ್ಲಿ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.

ವಿವಿಧ ವಾಧ್ಯ ಮೇಳದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಚೌಕಿಮಠಕ್ಕೆ ತೆರಳಿ ಬಳಿಕ ಮಠಕ್ಕೆ ಆಗಮಿಸಿತು. ಇದೇ ವೇಳೆ ಲಘು ರಥೋತ್ಸವಕ್ಕೂ ಚಾಲನೆ ನೀಡಲಾಯಿತು. ಅಮರಪ್ಪ ಕಲಬುರ್ಗಿ, ಸಿದ್ರಾಮೇಶ ಬೇಲೇರಿ, ಕಳಕೇಶ ಅರಕೇರಿ, ಶರಣಪ್ಪ ಮಳಗಿ, ವಿರೂಪಾಕ್ಷಯ್ಯ ಹಿರೇಮಠ, ಎಸ್.ಡಿ.ಅಪ್ಪಾಜಿ ಇದ್ದರು.