ಟೆಕ್ನೋ-ಕಲ್ಚರಲ್ ಫೆಸ್ಟ್ ಇನ್ಕ್ರಿಡಿಯಾವನ್ನು ವಿಫ್ಲಿ ಇಂಡಿಯಾ ಎಲ್‌ಎಲ್ಪಿಯ ಟ್ಯಾಲೆಂಟ್ ಆ್ಯಂಡ್ ಕಲ್ಚರ್(ಎಚ್‌ಆರ್) ವಿಭಾಗ ಮುಖ್ಯಸ್ಥ ರವೀಶ ರಾವ್ ಉದ್ಘಾಟಿಸಿದರು.  
ಜಿಲ್ಲೆ

ತಂತ್ರಜ್ಞಾನದಲ್ಲಿ ಹೊಸ ಮಜಲು ಅನ್ವೇಷಣೆ

ಇಂದಿರಾ ಎನ್ ಕೆ

ಕಾರ್ಕಳ: ಶಿಕ್ಷಣದಲ್ಲಿ ನಾವೀನ್ಯ ಮತ್ತು ಸೃಜನಶೀಲತೆ ಮಹತ್ವ ಅರಿಯುವುದು ಅಗತ್ಯ. ಇನ್ಕ್ರಿಡಿಯಾದಂತಹ ವೇದಿಕೆಗಳ ಮೂಲಕ ತಂತ್ರಜ್ಞಾನ ಮತ್ತು ಸಂಸ್ಕೃತಿಯಲ್ಲಿ ಹೊಸ ಮಜಲು ಅನ್ವೇಷಿಸಲು ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕೆಂದು ವಿಫ್ಲಿ ಇಂಡಿಯಾ ಎಲ್‌ಎಲ್ಪಿಯ ಟ್ಯಾಲೆಂಟ್ ಆ್ಯಂಡ್ ಕಲ್ಚರ್(ಎಚ್‌ಆರ್) ವಿಭಾಗ ಮುಖ್ಯಸ್ಥ ರವೀಶ ರಾವ್ ಹೇಳಿದರು.

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಟೆಕ್ನೋ-ಕಲ್ಚರಲ್ ಫೆಸ್ಟ್ ಇನ್ಕ್ರಿಡಿಯಾ 2025ನ್ನು ಉದ್ಘಾಟಿಸಿ ಮಾತನಾಡಿದರು.

ನಿಟ್ಟೆ ಡೀಮ್ಡ್ ಟುಬಿ ಯೂನಿವರ್ಸಿಟಿ ಕುಲಾಧಿಪತಿ ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ತಾಂತ್ರಿಕ ಶಿಕ್ಷಣ ವಿಭಾಗ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ ಉಪಸ್ಥಿತರಿದ್ದರು. ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲೂಣ್ಕರ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ.ಐ.ರಮೇಶ್ ಮಿತ್ತಂತಾಯ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗ ಡೀನ್ ಡಾ.ನರಸಿಂಹ ಬೈಲ್ಕೇರಿ ಕಾರ್ಯಕ್ರಮ ಸಂಯೋಜಿಸಿದರು.