ಜಿಲ್ಲೆ

ನಂಬಿಕೆ ವಿಚಾರದಲ್ಲಿ ಸ್ತ್ರೀ ಶೋಷಣೆ: ವಕೀಲೆ ಪಿ.ಕುಞೌಯಿಷಾ ಹೇಳಿಕೆ

ಕಾಸರಗೋಡು: ನಂಬಿಕೆ, ಆಚಾರದ ಹೆಸರಿನಲ್ಲಿ ಮಹಿಳೆಯರ ಶೋಷಣೆ ಕೊನೆಗೊಳಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಸದಸ್ಯೆ ಪಿ.ಕುಞೌಯಿಷಾ ತಿಳಿಸಿದ್ದಾರೆ.

ಕಾಸರಗೋಡು ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಜಿಲ್ಲಾಮಟ್ಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಧಾರ್ಮಿಕ ಆಚಾರಗಳ ನೆಪದಲ್ಲಿ ಸಮಾಜಲ್ಲಿ ನಡೆಯುವ ಅನೇಕ ವಿಚಾರಗಳು ಕೆಲವು ಮಹಿಳೆಯರನ್ನು ಮಾನಸಿಕ, ದೈಹಿಕ ಹಾಗೂ ಆರ್ಥಿಕವಾಗಿ ಶೋಷಿಸುವ ಒಂದು ಮಾರ್ಗ. ಮನೆಯಲ್ಲಿ ತಲೆದೋರುವ ಸಮಸ್ಯೆಗಳ ನೆಪದಲ್ಲಿ ವಿವಾಹವಾಗಿ ಆಗಮಿಸಿದ ಮಹಿಳೆಯ ಶೋಷಣೆ ನಡೆಸಲಾಗುತ್ತಿದ್ದು, ಇದಕ್ಕೆ ಮಹಿಳೆಯ ಗಂಡ, ಅತ್ತೆ-ಮಾವ ಸಮಾನ ಕಾರಣರಾಗುತ್ತಿದ್ದಾರೆ. ವಿದ್ಯಾವಂತ ಮಹಿಳೆಯರು ಕೂಡ ಇಂತಹ ಶೋಷಣೆ ವಿರುದ್ಧ ಪ್ರತಿಕ್ರಿಯಿಸುವುದಿಲ್ಲ. ಫೋನ್ ಮೂಲಕ ವಿಚ್ಛೇದನ ಪಡೆಯುವುದೂ ಹೆಚ್ಚಾಗುತ್ತಿದೆ. ವಿದ್ಯಾವಂತ ಹುಡುಗಿಯರಿಗೂ ಕಾನೂನಿನ ರಕ್ಷಣೆ ಬಗ್ಗೆ ಮಾಹಿತಿಯಿಲ್ಲದಿರುವುದರಿಂದ ಶೋಷಣೆ ಸಹಿಸಿಕೊಂಡು ಜೀವನ ಸಾಗಿಸುವ ಸ್ಥಿತಿಯಿದೆ. ಇಂತಹ ವಿಷಯಗಳ ಬಗ್ಗೆ ಮಹಿಳಾ ಆಯೋಗ ಸಾಮಾಜಿಕ ಜಾಗೃತಿ ಅಭಿಯಾನ ನಡೆಸುತ್ತಿದೆ ಎಂದರು.