ಬೈಂದೂರು: ಸಮೃದ್ಧ ಬೈಂದೂರು ಸಂಸ್ಥೆ ಮೂಲಕ ಬೈಂದೂರು ಕ್ಷೇತ್ರದ ಬಹುತೇಕ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಜತೆಗೆ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದಾನಿಗಳ ನೆರವಿನಿಂದ ಅತ್ಯುತ್ತಮ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೀಸ್ ಯೋಜನೆಯಲ್ಲಿ ಉಡುಪಿ ರೋಬೋ ಸಾಪ್ಟ್ ಅವರ ಸಿಎಸ್‌ಆರ್ ನಿಧಿಯಿಂದ ತಾರಾಪತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕ ಮತ್ತು ಬಾಲಕಿಯರ ಶೌಚಗೃಹ ಮತ್ತು ದ್ವಿಭಾಷಾ ತರಗತಿ ಉದ್ಘಾಟಿಸಿ, ಮದ್ದುಕೃಷ್ಣ-ಮುದ್ದುರಾಧೆ ಸ್ಪರ್ಧೆಗೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ವಿತರಿಸಿ ಮಾತನಾಡಿದರು. ಸಮೃದ್ಧ ಬೈಂದೂರು ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ರೋಬೋ ಸಾಫ್ಟ್ ಕಂಪನಿ ಲೆಕ್ಕ ಪರಿಶೋಧನೆ ವಿಭಾಗ ಮುಖ್ಯಸ್ಥ ಕೃಷ್ಣರಾಜ್ ರಾವ್ ಅವರನ್ನು ಸನ್ಮಾನಿಸಲಾಯಿತು. ಸುರೇಶ ಬೆಸ್ಕೂರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ್ದ ಐಡಿ ಕಾರ್ಡ್‌ಗಳನ್ನು ವಿತರಿಸಲಾಯಿತು. ಜಿಪಂ ಮಾಜಿ ಸದಸ್ಯರಾದ ಎಸ್.ಮದನಕುಮಾರ್, ಸುರೇಶ ಬಟ್ವಾಡಿ, ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಮರವಂತೆ, ರೋಬೋ ಸಾಫ್ಟ್ ಕಂಪನಿ ಸೀನಿಯರ್ ಮ್ಯಾನೇಜರ್ ಶರತ್ ಆಚಾರ್ಯ, ಕಾರ್ಯದರ್ಶಿ ಚಕ್ರಿ ಹೆಗ್ಡೆ, ಅಭಿಯಂತರ ಗೋಪಾಲಕೃಷ್ಣ ಕಾಮತ್, ಬಿಆರ್‌ಪಿ ರಾಮಕೃಷ್ಣ ದೇವಾಡಿಗ, ಮುತ್ತಯ್ಯ ಖಾರ್ವಿ, ಗಣೇಶ ಎಂ.ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಸ್ವಾಗತಿಸಿದರು. ಸುಧೀರ್ ಕಾರ್ಯಕ್ರಮ ನಿರ್ವಹಿಸಿದರು.
ಎರಡು ವರ್ಷಗಳಿಂದ ವಿವಿಧ ಕಂಪನಿಗಳನ್ನು ಸಂಪರ್ಕಿಸಿ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಶಾಲೆಗಳನ್ನು ಗುರುತಿಸಿ ವಿವಿಧ ಕಂಪನಿಗಳು ನೀಡುತ್ತಿರುವ ಕೊಡುಗೆ ನೂರಾರು ಬಡ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ ಮತ್ತು ಕ್ಷೇತ್ರದ ಗೌರವವನ್ನು ಹೆಚ್ಚಿಸಿದೆ. ಶಾಸಕ ಗುರುರಾಜ ಗಂಟಿಹೊಳೆ. ಸಿಎಸ್‌ಆರ್ ನಿಧಿಗಳ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಶಾಸಕರು ಶ್ರಮಿಸುತ್ತಿದ್ದಾರೆ. 300 ಶಾಲೆಗಳ ಪೈಕಿ 70 ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲಾಗಿದ್ದು, ಇನ್ನೂ ಕೆಲವೆಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಬಿ.ಎಸ್.ಸುರೇಶ ಶೆಟ್ಟಿ, ಸಮೃದ್ಧ ಬೈಂದೂರು ಅಧ್ಯಕ್ಷ