ಜಿಲ್ಲೆ

ಜಿಲ್ಲಾಮಟ್ಟದ ಸ್ಪರ್ಧೆಗೆ ಎಕ್ಸಲೆಂಟ್ ವಿದ್ಯಾರ್ಥಿಗಳು ಆಯ್ಕೆ

Manikya M

ಮೂಡುಬಿದಿರೆ: ಭಾರತೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಆಯೋಜಕತ್ವದ INSPIRE AWARD MANAK 2024 ಸ್ಪರ್ಧೆಯಲ್ಲಿ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಾದ ಮನ್ವಿತ್‌ರಾಜ್ ಜೈನ್ ಹಾಗೂ ಮೈತ್ರಿ ಎಂ.ಎಚ್. ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮನ್ವಿತ್‌ರಾಜ್ ಜೈನ್ ಅವರು Electricity generation by busy High way ಹಾಗೂ ಮೈತ್ರಿ ಎಂ.ಎಚ್. ಅವರು Motar bike theft detector ವಿಷಯಕ್ಕೆ ಸಂಬಂಧಿಸಿ ವೈಜ್ಞಾನಿಕ ವಾದರಿ ಸಿದ್ಧಗೊಳಿಸಿದ್ದರು. ಇದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ 10,000 ರೂ. ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆದುಕೊಂಡಿದೆ.

ಈ ಹಿಂದೆ ಕೂಡ ವೈಜ್ಞಾನಿಕ ವಾದರಿ, ವೈಜ್ಞಾನಿಕ ಪ್ರಬಂಧಗಳ ಮೂಲಕ ಎಕ್ಸಲೆಂಟ್ ಸಂಸ್ಥೆಯ ಹಲವು ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯಮಟ್ಟಕ್ಕೆ ಆಯ್ಕೆಯಾಗಿದ್ದರು. ಸಾಧಕ ವಿದ್ಯಾರ್ಥಿಗಳನ್ನು ಎಕ್ಸಲೆಂಟ್ ಸಂಸ್ಥೆಯ ಉಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯಶಿಕ್ಷಕ ಶಿವಪ್ರಸಾದ್ ಭಟ್ ಅಭಿನಂದಿಸಿದ್ದಾರೆ.