ಕುಂದಾಪುರ: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪೂರ್ವ ಸಿದ್ಧತೆ ಪ್ರಯುಕ್ತ ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಪರೀಕ್ಷೆಯೊಂದು ಹಬ್ಬ ಕಾರ್ಯಕ್ರಮ ತೆಕ್ಕೆಟ್ಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆಯಿತು.
ಜೆಸಿಐ ಕುಂದಾಪುರ ಸಿಟಿ ಮಾಜಿ ಅಧ್ಯಕ್ಷ ವಿಜಯ ಭಂಡಾರಿ ಉದ್ಘಾಟಿಸಿದರು. ಜೆಸಿಐ ತರಬೇತುದಾರ ಕೆ.ಕೆ.ಶಿವರಾಮ ಕಾರ್ಯಕ್ರಮ ನಡೆಸಿಕೊಟ್ಟರು. ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ಯೂಸುಫ್ ಸಲೀಮ್, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಕಾರ್ಯದರ್ಶಿ ಕಿರಣ್ ದೇವಾಡಿಗ, ಉಪ ಪ್ರಾಂಶುಪಾಲೆ ಸಂಧ್ಯಾರಾಣಿ ಉಪಸ್ಥಿತರಿದ್ದರು.