ಹರಪನಹಳ್ಳಿಯ ಇಜಾರಿ ಶಿರಸಪ್ಪ ವೃತ್ತದಲ್ಲಿ ಭಾನುವಾರ ಪೋಲಿಸರು ಆಟೊಗಳನ್ನು ತಡೆದು, ಪರಿಶೀಲಿಸಿ ದಂಡ ವಿಧಿಸಿದರು. ಪಿಎಸ್‌ಐ ಎಸ್.ಸಿ.ಹಿರೇಮಠ, ಸಿಬ್ಬಂದಿಗಳಾದ ಡಿ.ರುದ್ರಪ್ಪ, ವಸಂತಪ್ಪ, ನಿಂಗಪ್ಪ, ರಾಜಶೇಖರ, ಅಜ್ಜಪ್ಪ ಇದ್ದರು. 
ಜಿಲ್ಲೆ

ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಿ: ಪಿಎಸ್‌ಐ ಎಸ್.ಸಿ.ಹಿರೇಮಠ ಸೂಚನೆ

Gangavati - Desk - Veeresh S Ullagaddi

ಹರಪನಹಳ್ಳಿ: ಚಾಲಕರು ಸಾರ್ವಜನಿಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡಬಾರದು. ಅಲ್ಲದೇ ಸಂಚಾರಿ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಿ ವಾಹನವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ಪಿಎಸ್‌ಐ ಎಸ್.ಸಿ.ಹಿರೇಮಠ ಹೇಳಿದರು.


ಪಟ್ಟಣದ ಇಜಾರಿ ಶಿರಸಪ್ಪ ವೃತ್ತದಲ್ಲಿ ಭಾನುವಾರ 50ಕ್ಕೂ ಹೆಚ್ಚು ಆಟೋಗಳನ್ನು ತಡೆದು ಇನ್ಸೂರೆನ್ಸ್, ಡಿಎಲ್, ವಾಹನ ದಾಖಲೆ ಪರಿಶೀಲಿಸಿ ಮಾತನಾಡಿದರು. ಆಟೋಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಕರ್ಕಶ ಧ್ವನಿವರ್ಧಕ ಬಳಕೆ ಮಾಡಬಾರದು. ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎಂದರು. ಸಿಬ್ಬಂದಿಗಳಾದ ಡಿ.ರುದ್ರಪ್ಪ, ವಸಂತಪ್ಪ, ನಿಂಗಪ್ಪ, ರಾಜಶೇಖರ, ಅಜ್ಜಪ್ಪ, ನಾಗರಾಜ, ಹನುಮಂತಪ್ಪ ಇತರರಿದ್ದರು.