ಸಂಚಾರ ನಿಯಮ ಕಡ್ಡಾಯ ಪಾಲನೆ ಮಾಡಿ

2607Aland1
ಆಳಂದನಲ್ಲಿ ಡಿವೈಎಸ್‌ಪಿ ಆರ್.ಗೋಪಿ ಅವರು ಸಂಚಾರ ನಿಯಮ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಪಿ.ಐ.ಮಹಾದೇವ ಪಂಚಮುಖಿ, ಪ್ರಾಂಶುಪಾಲೆ ಜಹೀರಾ ಫಾತಿಮಾ ಇತರರಿದ್ದರು.
Published on

ಆಳಂದ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ವೇಗದಲ್ಲಿ ವಾಹನ ಚಲಾಯಿಸಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಡ್ರೆÊವಿಂಗ್‌ನಲ್ಲಿ ಫ್ಯಾಶನ್ ಮಾಡಬೇಡಿ ಎಂದು ಡಿವೈಎಸ್‌ಪಿ ಆರ್.ಗೋಪಿ ಕಿವಿಮಾತು ಹೇಳಿದರು.

ಸರ್ಕಾರಿ ಪದವಿಪೂರ್ವ (ಬಾಲಕಿಯರ) ಕಾಲೇಜು ಆವರಣದಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದ ಅವರು, ರಸ್ತೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದಿರುವುದರಿಂದಲೇ ಸಾಕಷ್ಟು ಅಪಘಾತ ಜರುಗುತ್ತಿವೆ. ಈ ವರ್ಷ ಜಿಲ್ಲೆಯಲ್ಲಿ ಒಟ್ಟಾರೆ ೧೭೩ಕ್ಕೂ ಹೆಚ್ಚು ಜನರು ರಸ್ತೆ ಸುರಕ್ಷತೆ ನಿಯಮ ಪಾಲನೆ ಮಾಡದಿರುವುದರಿಂದಲೇ ಮೃತಪಟ್ಟಿದ್ದಾರೆ ಎಂದರು.

ಪಿಐ ಮಹಾದೇವ ಪಂಚಮುಖಿ ಮಾತನಾಡಿ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ದಾಖಲಾತಿ, ಲೈಸೆನ್ಸ್, ವಿಮೆ ಪತ್ರ ಕಡ್ಡಾಯ ಇಟ್ಟುಕೊಳ್ಳಬೇಕು. ಕಾರು ಚಾಲಕರು ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಸಂಚಾರ ನಿಯಮ ಮೀರಿದರೆ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರಾಂಶುಪಾಲೆ ಜಹೀರಾ ಫಾತಿಮಾ, ಪ್ರಮುಖರಾದ ಶ್ರೀಶೈಲ ಮಾಳಗೆ, ಜಂಟಿರಾಯ, ಸುಮಂಗಲಾ ನಾಟೀಕರ್, ಮಾಸುಮ್ ಬೇಗಂ, ಬಸವರಾಜ, ವಿಶ್ವನಾಥ ಕೊಚ್ಟಿ, ಸಿದ್ದರಾಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net