ಯಲಬುರ್ಗಾ: ಒತ್ತಡದ ಜೀವನ, ಆಹಾರ ಕ್ರಮದಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ ಎಂದು ಗಾಣಧಾಳ ಪತ್ತಿನ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ವಿಜಯಕುಮಾರ ಹೇಳಿದರು.
ಇದನ್ನೂ ಓದಿ: ಕಿಡ್ನಿ ಸ್ಟೋನ್ನಿಂದ ಬಳಲುತ್ತಿದ್ದೀರಾ?; ಹಾಗಾದ್ರೆ ಈ ಆಹಾರ ಪದಾರ್ಥಗಳಿಂದ ಅಂತರ ಕಾಯ್ದುಕೊಳ್ಳಿ | Health Tips
ತಾಲೂಕಿನ ಗಾಣಧಾಳದಲ್ಲಿ ಗಾಣಧಾಳ ಪತ್ತಿನ ಸೌಹಾರ್ದ ಸಹಕಾರ ನಿಯಮಿತ, ಜಿಲ್ಲಾ ಅಂಧತ್ವ ನಿವಾರಣಾ ಸಂಘ ಹಾಗೂ ಲಯನ್ಸ್ ಕ್ಲಬ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕಣ್ಣು ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದರು.
ಮಾನವ ದೇಹದ ಅತೀ ಸೂಕ್ಷ್ಮ ಅಂಗವಾದ ಕಣ್ಣಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ವರ್ಷದಲ್ಲಿ ಒಂದು ಬಾರಿಯಾದರೂ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹುಟ್ಟಿನಿಂದಲೇ ದೃಷ್ಟಿ ಕಳೆದುಕೊಂಡವರು ಪ್ರಪಂಚ ನೋಡುವ ಭಾಗ್ಯದಿಂದ ವಂಚಿತರಾಗಿದ್ದಾರೆ.
ಆದರೆ, ಬಹಳಷ್ಟು ಜನ ನಿರ್ಲಕ್ಷೃದಿಂದ ಕಣ್ಣು ಕಳೆದುಕೊಂಡಿದ್ದಾರೆ. ಸುಂದರ ಬದುಕು ನಡೆಸಲು ಕಣ್ಣು ಮಹತ್ವದ ಅಂಗವಾಗಿದೆ. ಆದ್ದರಿಂದ ಎಲ್ಲರೂ ದೃಷ್ಟಿ ರಕ್ಷಣೆಗೆ ಒತ್ತು ನೀಡಬೇಕು ಎಂದರು. 250ಜನ ತಪಾಸಣೆಗೆ ಒಳಗಾದರು. ಇದರಲ್ಲಿ 65 ಜನರನ್ನು ಕಣ್ಣಿನ ಪೊರೆ ಚಿಕಿತ್ಸೆಗೆ ಕೊಪ್ಪಳ ಲಯನ್ಸ್ ಕ್ಲಬ್ ಆಸ್ಪತ್ರೆಗೆ ಕಳಿಸಲು ಏರ್ಪಾಡು ಮಾಡಲಾಯಿತು.
ಸಂಘದ ಅಧ್ಯಕ್ಷ ವಿನೋದಕುಮಾರ, ಉಪಾಧ್ಯಕ್ಷ ಮಲ್ಲಪ್ಪ ಬಳಿಗಾರ, ಆಡಳಿತ ವೈದ್ಯಾಧಿಕಾರಿ ಟಿ.ಜೆ.ರಮೇಶ, ಲಯನ್ಸ್ ಕ್ಲಬ್ ಆಸ್ಪತ್ರೆ ವೈದ್ಯರಾದ ಡಾ.ಸಚಿನ್ ಮಳಿಮಠ, ಹನುಮಂತ, ಪ್ರಮುಖರಾದ ಹನುಮೇಶ ಹುಲಸನಹಟ್ಟಿ, ಮರಿಯಪ್ಪ ಹಟ್ಟಿದೇಸಾಯಿ ಇತರರಿದ್ದರು.