ಸಂಡೂರು ತಾಲೂಕಿನ ತೋರಣಗಲ್‌ನ ಅಂಕಳಾಮ್ಮ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕುರಿತು ಜಾಗೃತಿ ಮತ್ತು ಚಿತ್ರಕಲೆ ಸ್ಪರ್ಧೆ ನಡೆಸಲಾಯಿತು. ಪ್ರಭಾರ ಮುಖ್ಯ ಶಿಕ್ಷಕಿ ರಜನಿ, ಬಿಎಚ್‌ಇಒ ಶಿವಪ್ಪ, ಸಮಾಲೋಚಕ ಪ್ರಶಾಂತ್ ಇತರರಿದ್ದರು. 
ಜಿಲ್ಲೆ

ಪ್ರತಿಯೊಬ್ಬರೂ ನೇತ್ರದಾನ ಮಾಡಲು ಮುಂದಾಗಿ

Gangavati - Desk - Veeresh S Ullagaddi

ಸಂಡೂರು: ಅಂಧ ಮಕ್ಕಳ ಜೀವನಕ್ಕೆ ಬೆಳಕಾಗುವುದು ಪುಣ್ಯದ ಕಾರ್ಯವಾಗಿದ್ದು, ಪ್ರತಿಯೊಬ್ಬರೂ ನೇತ್ರದಾನ ಮಾಡಲು ಮುಂದಾಗಬೇಕು ಎಂದು ಪ್ರಭಾರ ಮುಖ್ಯ ಶಿಕ್ಷಕಿ ರಜನಿ ಹೇಳಿದರು.


ತಾಲೂಕಿನ ತೋರಣಗಲ್‌ನ ಅಂಕಳಾಮ್ಮ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜೆಎಸ್‌ಡಬ್ಲುೃ ಫೌಂಡೆಷನ್‌ನ ಏಸ್ಕೇರ್ ಸಂಸ್ಥೆಯ ಮ್ಯಾಜಿಕ್ ಬಸ್‌ನ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕುರಿತು ಜಾಗೃತಿ ಮತ್ತು ಚಿತ್ರಕಲೆ ಸ್ಪರ್ಧೆ ಉದ್ದೇಶಿಸಿ ಮಾತನಾಡಿದರು.

ಸೆಪ್ಟೆಂಬರ್ 8ರವರೆಗೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ ಮಾಡಲಾಗುತ್ತಿದೆ. ಸ್ವಯಂ ಪ್ರೇರಣೆಯಿಂದ ನೇತ್ರದಾನ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.


ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ರಾಜ್ಯದಲ್ಲಿ 1.5 ಕೋಟಿ ಜನರು ಅಂಧತ್ವದಿಂದ ಬಳಲುತ್ತಿದ್ದು, 46 ಲಕ್ಷ ಜನರಿಗೆ ಕಾರ್ನಿಯಾ ಅವಶ್ಯಕತೆ ಇದೆ. ನೇತ್ರದಾನ ಮಾಡಲು ಎಲ್ಲರೂ ನೋಂದಣಿ ಮಾಡಿಕೊಳ್ಳಬೇಕು.

ಮರಣ ನಂತರ ಕಣ್ಣುಗಳು ಮಣ್ಣು ಸೇರುವ ಬದಲು ಅಂಧರ ಬಾಳಿಗೆ ಬೆಳಕಾಗಬೇಕು. ದಿ.ನಟ ಪುನೀತ್ ರಾಜಕುಮಾರ್ ನೇತ್ರದಾನ ಮತ್ತು ಅಂಗಾಂಗ ದಾನ ಮಾಡಿರುವುದು ರಾಜ್ಯದ ಗಮನ ಸೆಳೆದಿದೆ. ಎಲ್ಲರೂ ನೇತ್ರದಾನ ಮತ್ತು ಅಂಗಾಂಗ ದಾನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.


8ನೇ ತರಗತಿ ವಿದ್ಯಾರ್ಥಿಗಳಾದ ಪುರಂದರೇಶ್ವರಿ, ಕವಿತಾ, ಫನಾಬೇಗಂ, ಸುಪ್ರಿಯಾ, ಸಹಸ್ರ, ಚಂದ್ರಕಲಾ, ನಂದಿನಿ, ನಿಖೀಲ್ ನೇತ್ರದಾನ ಚಿತ್ರ ಬಿಡಿಸಿದರು. ಮ್ಯಾಜಿಕ್ ಬಸ್‌ನ ಶಿಕ್ಷಕ ಮಲ್ಲೇಶ್, ಸಮಾಲೋಚಕ ಪ್ರಶಾಂತ್, ಬಸವರಾಜ್,

ಸಹ ಶಿಕ್ಷಕಿ ಪಾರ್ವತಿ, ವಿದ್ಯಾರ್ಥಿಗಳಾದ ಮೌನಿಕ, ಮೇಘನಾ, ಲಾವಣ್ಯ, ಸಂಧ್ಯಾ, ಉಷಾ, ಕಾರ್ತಿಕ್, ಪವನ್‌ಕುಮಾರ್, ಬಾಷ, ರಾಕೇಶ್, ಅಜಿತ್ ಇತರರಿದ್ದರು.