ಜಿಲ್ಲೆ

ಹೆಜಮಾಡಿ ಆಲಡೆಯಲ್ಲಿ ಬಾಲಾಲಯ ಪ್ರತಿಷ್ಠಾಪನೆ

ಪಡುಬಿದ್ರಿ: ಐದು ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ವಾಣಗೊಳ್ಳಲಿರುವ ಹೆಜಮಾಡಿ ಬಸ್ತಿಪಡ್ಪು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ ದಾರಗ ಆಲಡೆಯ ಶ್ರೀ ದೇವರ ಮತ್ತು ಪರಿವಾರ ಶಕ್ತಿಗಳ ಸಂಕೋಚ ಹಾಗೂ ಬಾಲಾಲಯ ದೇವತಾ ಶಕ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮ ಕ್ಷೇತ್ರದ ತಂತ್ರಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ಮತ್ತು ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿಗಳೊಂದಿಗೆ ಶುಕ್ರವಾರ ನೆರವೇರಿತು.

ಗುರುವಾರ ರಾತ್ರಿಯಿಂದ ಧಾರ್ಮಿಕ ವಿಧಿ ವಿಧಾನ ನಡೆಸಿದ ಬಳಿಕ ಶುಕ್ರವಾರ ಬೆಳಗ್ಗೆಯಿಂದಲೇ ಸಂಕೋಚ ಸಹಿತ ದೇವತಾ ಶಕ್ತಿಗಳ ಬಾಲಾಲಯ ಪ್ರತಿಷ್ಠಾಪನಾ ವಿಧಿಗಳನ್ನು ನಡೆಸಲಾಯಿತು.

ಶ್ರೀ ಬ್ರಹ್ಮಲಿಂಗೇಶ್ವರ, ಅಬ್ಬಗ ದಾರಗ, ಶ್ರೀ ಕುವಾರ, ರಕ್ತೇಶ್ವರೀ, ಕ್ಷೇತ್ರಪಾಲ, ನಂದಿಗೋಣ, ಸಾರವಾನ್ಯ ದೈವ ಶಕ್ತಿಗಳನ್ನು ಸಂಕೋಚಗೊಳಿಸಿ ಬಾಲಾಲಯ ಪ್ರತಿಷ್ಠಾಪನೆ ನಡೆಯಿತು. ಶ್ರೀ ನಾಗದೇವರನ್ನು ಸಂಕೋಚಗೊಳಿಸಿ ಜಳಕದ ಕೆರೆಯಲ್ಲಿ ಪ್ರತಿಷ್ಠಾಪಿಸಲಾಯಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಟೇಲರಮನೆ ಪುಷ್ಪರಾಜ್ ಶೆಟ್ಟಿ, ಆಡಳಿತ ಮೊಕ್ತೇಸರ ಸುರೇಶ್ ಶೆಟ್ಟಿ, ಹೆಜವಾಡಿ ಶ್ರೀ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಹೆಜವಾಡಿ ಬಿಲ್ಲವರ ಸಂ ಅಧ್ಯಕ್ಷ ಮೋಹನ್‌ದಾಸ್, ಮೂಲ್ಕಿ ಬಿಲ್ಲವರ ಸಂ ಅಧ್ಯಕ್ಷ ವಾಮನ ಕೋಟ್ಯಾನ್, ರವಿ ಶೆಟ್ಟಿ, ಸುಧಾಕರ ಕರ್ಕೇರ, ಎಚ್.ರವಿ ಕುಂದರ್, ಹೇಮಾನಂದ ಪುತ್ರನ್, ಸತೀಶ್ ಕೋಟ್ಯಾನ್, ಅರುಣ್ ಶೆಟ್ಟಿ, ಸುರೇಖಾ ಶೆಟ್ಟಿ, ವಾಧವ ಸನಿಲ್, ಪ್ರಭೋದ್‌ಚಂದ್ರ, ಗಣೇಶ್ ಕೋಟ್ಯಾನ್, ಶರಣ್‌ಕುಮಾರ್ ಮಟ್ಟು, ದೊಂಬ ಪೂಜಾರಿ, ಶಿಲ್ಪಿ ಸುಬ್ರಹ್ಮಣ್ಯ ಕಾರ್ಕಳ, ಡಾ.ಶ್ರೀವತ್ಸ ಉಪಾಧ್ಯಾಯ ಉಪಸ್ಥಿತರಿದ್ದರು.