ಎಮ್ಮಿಗನೂರು ಜೆಸ್ಕಾಂ ಸಿಬ್ಬಂದಿಗೆ ವಿವಿಧ ಸಂಘಟನೆಗಳು ಗುರುವಾರ ಮನವಿ ಸಲ್ಲಿಸಿದವು. ವೇದಿಕೆ ರಾಜ್ಯ ಉಪಾಧ್ಯಕ್ಷ ಎಚ್.ಮಲ್ಲೇಶಪ್ಪ, ರಾಮು, ಜಡೆಪ್ಪ, ಬಸಪ್ಪ ಇನ್ನಿತರರಿದ್ದರು. 
ಜಿಲ್ಲೆ

ವಿದ್ಯುತ್ ಕಡಿತದಿಂದ ಸಮಸ್ಯೆ ಸೃಷ್ಟಿ

ಪ್ರವೀಣ ಉದುಸಾ ದಲಬಂಜನ್

ಕುರುಗೋಡು: ನಿರಂತರವಾಗಿ ವಿದ್ಯುತ್ ಪೂರೈಸಲು ಒತ್ತಾಯಿಸಿ ವಿವಿಧ ಸಂಘಟನೆಗಳು ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ಜೆಸ್ಕಾಂ ಸಿಬ್ಬಂದಿಗೆ ಗುರುವಾರ ಮನವಿ ಸಲ್ಲಿಸಿದರು.

ನಿರಂತರವಾಗಿ ವಿದ್ಯುತ್ ಪೂರೈಸಿ

ಪ್ರತಿದಿನ 15ಕ್ಕೂ ಹೆಚ್ಚು ಬಾರಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಕರೆಂಟ್‌ನ ಕಣ್ಣಾಮುಚ್ಚಾಲೆ ಆಟದಿಂದ ಕೃಷಿ ಚಟುವಟಿಕೆ, ಹಿಟ್ಟಿನ ಗಿರಣಿ, ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಪೇರಿ ಹಾಗೂ ಹೋಟೆಲ್ ಕೆಲಸಗಳಿಗೆ ಸಮಸ್ಯೆಯಾಗುತ್ತಿದೆ. ಸರ್ಕಾರ ಜನರಿಗೆ ನಿರಂತರವಾಗಿ ವಿದ್ಯುತ್ ಸೌಲಭ್ಯವನ್ನು ಒದಗಿಸಬೇಕು. ಇದರಿಂದ ದೈನಂದಿನ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪದವಿಧರ ವೇದಿಕೆ ರಾಜ್ಯ ಉಪಾಧ್ಯಕ್ಷ ಎಚ್.ಮಲ್ಲೇಶಪ್ಪ ಒತ್ತಾಯಿಸಿದರು. ಪ್ರಮುಖರಾದ ರಾಮು, ಜಡೆಪ್ಪ, ಬಸಪ್ಪ, ದೊಡ್ಡ ಜಡೆಪ್ಪ, ಮಲ್ಲೇಶ್ ಕುಮಾರ್ ಇನ್ನಿತರರಿದ್ದರು.