More

    ನರೇಗಾ ಯೋಜನೆಯಡಿ ಬಹು ಬಾಳಿಕೆ ಆಸ್ತಿ ಸೃಜನೆ ಮಾಡಿ : ಜಿ ಎಸ್ ಪಾಟೀಲ

    ರೋಣ : ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನದಡಿ ನರೇಗಾ ಯೋಜನೆಯ ವ್ಯಾಪಕ ಪ್ರಚಾರಾರ್ಥವಾಗಿ ರೋಣ ಮತಕ್ಷೇತ್ರದ ಶಾಸಕರಾದ ಜಿ. ಎಸ್. ಪಾಟೀಲ ಅವರು ಉದ್ಯೋಗ ಖಾತ್ರಿ ರಥಕ್ಕೆ ಚಾಲನೆ ನೀಡಿದರು.

    ರೋಣ ತಾಲೂಕು ಪಂಚಾಯತ ಆವರಣದಲ್ಲಿ ಉದ್ಯೋಗ ಖಾತ್ರಿ ರಥಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ಬದುಕಿಗೆ ಭರವಸೆ ಯಾಗಿ ನರೇಗಾ ಯೋಜನೆ ಸಹಕಾರಿಯಾಗಿದೆ. ಈ ಬಾರಿ ನಮ್ಮ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದ ಕಾರಣ ಬರ ಆವರಿಸಿದೆ. ಬರಕ್ಕೆ ಯಾರು ಹೆದರುವ ಅವಶ್ಯಕತೆ ಇಲ್ಲ, ನಮ್ಮ ಸರ್ಕಾರ ಯದ್ದೋಪಾದಿಯಲ್ಲಿ ಹೋರಾಡಲು ಸಜ್ಜಾಗಿದೆ. ನರೇಗಾ ಯೋಜನೆಯಡಿ 150 ದಿನಗಳ ಮಾನವ ದಿನಗಳ ಸೃಜನೆ ಮಾಡಲು ಅವಕಾಶ ಕೊಡುವ ಕುರಿತು ಸರ್ಕಾರದ ಹಂತದಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದರು.

    ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ ರಾಜ ಇಲಾಖೆಯು ಈ ಕಾರ್ಯವನ್ನು ಹಮ್ಮಿಕೊಂಡಿದೆ. ಆ ದಿಸೆಯಲ್ಲಿ ಈ ಯೋಜನೆ ಬಗ್ಗೆ ಅಧಿಕಾರಿಗಳು ಸಾಕಷ್ಟು ತಿಳುವಳಿಕೆ ಇಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.

    2005 ರಲ್ಲಿ ಅಂದಿನ ಪ್ರಧಾನ ಮಂತ್ರಿ ಗಳಾದ ಡಾ. ಮನಮೋಹನ ಸಿಂಗ್ ಅವರು ಈ ಕಾರ್ಯಕ್ರಮ ಅನುಷ್ಠಾನಕ್ಕೆ ತಂದರು. ರೈತ ಕಾರ್ಮಿಕರಿಗೆ – ರೈತ ಮಹಿಳೆಯರಿಗೆ ಈ ಕಾರ್ಯಕ್ರಮದ ತಿಳುವಳಿಕೆ ಬಂದಿದೆ. ಆದರೂ ಸಹ ಗ್ರಾಮೀಣ ಭಾಗದ ಜನರು ನೊಂದಣೆ ಮಾಡಿಕೊಳ್ಳವುದಿಲ್ಲಾ, ಹಾಗಾಗಿ ನಿಮಗೆ ಉದ್ಯೋಗ ಸಿಗುವದಿಲ್ಲಾ. ಹೆಚ್ಚು ತಿಳುವಳಿಕೆ ಇಟ್ಟುಕೊಂಡು ಗ್ರಾಮ ಪಂಚಾಯತಿ ಕಚೇರಿಗೆ  ಭೇಟಿಯಾಗಿ ನೊಂದಣೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    ಇದಕ್ಕೂ ಮೊದಲು ಮಾತನಾಡಿದ  ರೋಣ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರವಿ.ಎ.ಎನ್ ಅವರು  ನರೇಗಾ ಯೋಜನೆಯಂತಹ ಯೋಜನೆ, ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ಸಹ ಇಂತಹ ಅದ್ಬುತ  ಕಾರ್ಯಕ್ರಮ ಇಲ್ಲಾ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಆಶಯದ ಆಧಾರದ ಮೇಲೆ ಈ ನರೇಗಾ ಯೋಜನೆ ಜಾರಿಗೆ ಬಂದಿದೆ.

    ಪ್ರತಿಯೊಬ್ಬರೂ ದುಡಿಯಬೇಕು ದುಡಿದ ಹಣದಿಂದ ಬದುಕು ಸಾಗಿಸಬೇಕು ಅನ್ನುವ ಉದ್ದೇಶ ಸಹ ಇದರದ್ದಾಗಿದೆ. ಸಮಾಜದ,ಭವಿಷ್ಯದ ದೃಷ್ಟಿ ಹಾಗೂ ರಾಷ್ಟ್ರದ ದೃಷ್ಟಿಯಿಂದ ಈ ಯೋಜನೆ ಲಾಭ ಪಡೆಯುತ್ತದೆ ಎಂದರು. ರಾಜ್ಯದಲ್ಲಿ ಗದಗ ಜಿಲ್ಲೆ ಮಾನವ ದಿನಗಳ ಸೃಜನ ಮಾಡುವ ನಿಟ್ಟಿನಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಅದರಲ್ಲಿ ರೋಣ ತಾಲೂಕು ಮೊದಲು ಸ್ಥಾನದಲ್ಲಿ ಇದೆ ಎಂದರು.

    ಕೂಲಿಕಾರರಿಂದ ಕಾಮಗಾರಿ ಬೇಡಿಕೆಯನ್ನು ಪಡೆಯಲಾಗುತ್ತಿದೆ. ಹಾಗೂ ರೈತರಿಗೆ ಅನುಕೊಲವಾಗುವ ಕಾಮಗಾರಿಗಳನ್ನು ಪಂಚಾಯತಿಗೆ ಸಲ್ಲಿಸುವಂತೆ  ಇದೀಗ ಉದ್ಯೋಗ ಖಾತ್ರಿ ರಥವೂ ತಾಲೂಕಿನ 22 ಗ್ರಾಮ ಪಂಚಾಯತಿ ವ್ಯಾಪ್ತಿಗಳ ಗ್ರಾಮಗಳಲ್ಲಿ ಸಂಚರಿಸಿ ಯೋಜನೆಯಡಿ ಸಿಗುವ ಸೌಲಭ್ಯಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲಿದೆ. ಉದ್ಯೋಗ ಖಾತ್ರಿ ರಥದ ಪ್ರಚಾರವನ್ನು ತಾಲೂಕಿನ ಎಲ್ಲಾ ಕೂಲಿಕಾರ್ಮಿಕರು  ಪಡೆಯಬೇಕೆಂದು ಮಾಹಿತಿ ನೀಡಿದರು. 

    ಉದ್ಯೋಗ ಖಾತ್ರಿ ರಥದ ಚಾಲನಾ ಕಾರ್ಯಕ್ರಮದಲ್ಲಿ ರೋಣ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರು(ಗ್ರಾ.ಉ)  ರಿಯಾಜ್ ಖತೀಬ್,  ಸಹಾಯಕ ನಿರ್ದೇಶಕರು(ಪಂಚಾಯತ್ ರಾಜ್) ಶಿವಯೋಗಿ ರಿತ್ತಿ, ಸಹಾಯಕ ನಿರ್ಧಶಕರು ಅಕ್ಷರದಾಸೋಹ, AEE ನೀರು ಮತ್ತು ನೈರ್ಮಲ್ಯ ಇಲಾಖೆ, ತಾಲೂಕ ಯೋಜನಾ ಅಧಿಕಾರಿಗಳು, ಕೃಷಿ, ತೋಟಗಾರಿಕೆ , ಪಿ.ಆರ್‌.ಡಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು, ಇತರೆ ಅಧಿಕಾರಿಗಳು ಹಾಗೂ ಕಾರ್ಯಕ್ರಮದಲ್ಲಿ ತಾಲೂಕಿನ ನರೇಗಾ ಸಿಬ್ಬಂದಿ ವರ್ಗ, ತಾಲೂಕು ಪಂಚಾಯತ ಸಿಬ್ಬಂದಿ ವರ್ಗ, ಜಕ್ಕಲಿ ,ಇಟಗಿ ಮತ್ತು ಇತರೆ ಗ್ರಾಮಗಳ ಸದಸ್ಯರು ಹಾಗೂ ಜನ ಪ್ರತಿನಿಧಿಗಳು ಮತ್ತು ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.

    ಇದೇ ಸಂದರ್ಬದಲ್ಲಿ ರೋಣ ತಾಲೂಕ ಪಂಚಾಯತ ನರೇಗಾ ಸಿಬ್ಬಂದಿಗಳು ಸೇರಿಕೊಂಡು ಶಾಸಕರಾದ ಜಿ.ಎಸ್.ಪಾಟೀಲ ಅವರಿಗೆ ಸನ್ಮಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts