ಹೊಸಪೇಟೆಯಲ್ಲಿ ಬುಧವಾರ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ ತಿನಿಸುಗಳನ್ನು ಕೃಷಿ ಜೆಡಿ ಶರಣಪ್ಪ ಮುದುಗಲ್, ಕೃಷಿ ಡಿಡಿ ನಯಿಂಬಾಷಾ, ಎಡಿ ವಾಮದೇವ ಕೊಳ್ಳಿ, ಗೃಹ ವಿಜ್ಞಾನಿ ಡಾ.ಸುನೀತಾ ವೀಕ್ಷಿಸಿದರು. 
ಜಿಲ್ಲೆ

ಸಿರಿಧಾನ್ಯದಿಂದ ಮಧುಮೇಹ ನಿಯಂತ್ರಣ ಸಾಧ್ಯ

ಹೊಸಪೇಟೆ: ಬದಲಾದ ಜೀವನ ಪದ್ಧತಿಯಲ್ಲಿ ಸಿರಿಧಾನ್ಯ ಆಹಾರ ಬಳಸಿ ರೋಗಗಳಿಂದ ಮುಕ್ತರಾಗಿ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್ ಹೇಳಿದರು.

ಸಿರಿಧಾನ್ಯ ಸೇವನೆಯಿಂದ ರೋಗ ದೂರ

ಸಿರಿಧಾನ್ಯ ಹಬ್ಬದ ಪ್ರಯುಕ್ತ ಕೃಷಿ ಇಲಾಖೆ, ಕೃಷಿ ತಜ್ಞರ ಸಂಸ್ಥೆಯಿಂದ ನಗರದಲ್ಲಿ ಬುಧವಾರ ನಮ್ಮ ನಡಿಗೆ ಸಿರಿಧಾನ್ಯದ ಕಡೆ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಮಾತನಾಡಿದರು.

ಜನರು ಬಳಸುವ ಅಕ್ಕಿಗಿಂತ ಸಿರಿಧಾನ್ಯಗಳು ಆರೋಗ್ಯವಂತರಾಗಿರಲು ಸಹಾಯ ಮಾಡುತ್ತದೆ. ಆರೋಗ್ಯಪೂರ್ಣ ಬದುಕಿಗೆ ಸಿರಿಧಾನ್ಯಗಳನ್ನು ಅಧಿಕವಾಗಿ ಬಳಸುವಂತೆ ಪ್ರೇರೇಪಿಸಬೇಕಾಗಿದೆ. ಸಿರಿಧಾನ್ಯಗಳಿಂದ ಅತೀ ಕಡಿಮೆ ಪ್ರಮಾಣದ ಸಕ್ಕರೆ ಅಂಶ ರಕ್ತಕ್ಕೆ ಸೇರ್ಪಡೆಗೊಳ್ಳುವ ಕಾರಣ, ಮಧುಮೇಹದಂತೆ ಕಾಯಿಲೆ ನಿಯಂತ್ರಣದಿಂದರಲೂ ಸಾಧ್ಯವಾಗುತ್ತದೆ. ಸಿರಿಧಾನ್ಯಗಳು ಎಲ್ಲ ಹವಾಗುಣಕ್ಕೂ ಹೊಂದಿಕೊಂಡು ಸುಲಭವಾಗಿ ಬೆಳೆಯಬಹುದಾಗಿದೆ. ಜಿಲ್ಲೆಯಲ್ಲಿ ನವಣೆ, ಊದಲು, ಸಾಮೆ, ರಾಗಿ, ಸಜ್ಜೆ ಮುಂತಾದವುಗಳನ್ನು ಬೆಳೆಸಲು ರೈತರಿಗೆ ಪ್ರೋತ್ಸಾಹಿಸಬೇಕು ಎಂದರು.

ತೊಂಬತ್ತು ನಿಮಿಷಗಳಲ್ಲಿ ಪಾಕ ಸ್ಪರ್ಧೆಯಲ್ಲಿ 29 ಮಹಿಳೆಯರು ಬರಗಿನ ಬುತ್ತಿಹುಂಡೆ, ಪಾಯಸ, ಶಾಮ್ಯ ಪಾಯಸ, ಉದಲು ಕಟ್ಲೇಟ್, ರಾಗಿ ರೋಟ್ಟಿ, ಸಿರಿಧಾನ್ಯ ರೊಟ್ಟಿ, ಟೊಮೆಟೊ ಬಾತ್, ಮೀಲೆಟ್ ಮಲಾಯಿ, ನವಣಕ್ಕಿ ಬಿಸಿಬೇಳೆಬಾತ್, ರಾಗಿ ದೋಸೆ, ನವಣಕ್ಕಿನಕೋಬ್ರಿಅನ್ನ, ಸಾಮೇಕ್ಕಿ ಪೊಂಗಲ್ ಸೇರಿ ಇತರೆ ರುಚಿಕರವಾದ ಖಾದ್ಯಗಳು ಸಿದ್ಧಪಡಿಸಿದರು. ಹಗರಿಬೊಮ್ಮನಹಳ್ಳಿ ಮಾರೆಮ್ಮ ಮೊದಲ ಸ್ಥಾನ, ಹೊಸಪೇಟೆಯ ಕವಿತಾ ಎರಡನೇ ಸ್ಥಾನ, ಯು.ಶೋಭಾ ತೃತೀಯ ಸ್ಥಾನ ಪಡೆದುಕೊಂಡರು.
ಕೃಷಿ ಡಿಡಿ ನಯಿಂಬಾಷಾ, ಎಡಿ ವಾಮದೇವ ಕೊಳ್ಳಿ, ಗೃಹ ವಿಜ್ಞಾನಿ ಡಾ.ಸುನೀತಾ, ಕೃಷಿ ಅಧಿಕಾರಿಗಳಾದ ಪ್ರೀಯಾಂಕ, ರಾಜು ಇತರರಿದ್ದರು.