More

    ಆರ್ಟ್ ಆಫ್ ಲಿವಿಂಗ್​​ ವತಿಯಿಂದ ಸಿರಿಧಾನ್ಯ ಮೇಳ: ಸಾವಿರಾರು ಜನರು 180 ಮಳಿಗೆಗಳಿಗೆ ಭೇಟಿ

    ಬೆಂಗಳೂರು: ಆರ್ಟ್ ಆಫ್ ಲಿವಿಂಗ್​​ನ ರಮಣೀಯವಾದ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯುತ್ತಿರುವ ಮೂರು ದಿವಸಗಳ ಅಂತಾರಾಷ್ಟ್ರೀಯ ಸಿರಿಧಾನ್ಯ, ಸಾವಯವ ಹಾಗೂ ಪ್ರಾಕೃತಿಕ ರೈತ ಸಮಾವೇಶವು ಆರಂಭವಾಯಿತು.

    Art of Living, Siridhanya Mela,

    ಪ್ರಖ್ಯಾತ ಖಾದ್ಯಗಳಾದ ಉಪ್ಪಿನಕಾಯಿ, ಸಿಹಿತಿಂಡಿಗಳು, ಧಿಡೀರ್ ಆಹಾರಗಳು, ಹಿಟ್ಟುಗಳು, ಇತ್ಯಾದಿಗಳನ್ನು ಸಾವಿರಾರು ಜನರು ಸಮಾವೇಶಕ್ಕೆ ಭೇಟಿ ನೀಡಿ ಕೊಂಡರು. ಈ ವಸ್ತು ಪ್ರದರ್ಶನದಲ್ಲಿ 180 ಸಣ್ಣ ಮಳಿಗೆಗಳಿದ್ದು, ಇವುಗಳಲ್ಲಿ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.

    Art of Living, Siridhanya Mela,

    ಸಾವಯವ ಕೃಷಿ, ಪ್ರಾಕೃತಿಕ ಕೃಷಿಗೆ ಅವಶ್ಯಕವಾದ ವಸ್ತುಗಳ ವಿವರಣೆ, ಬೀಜಗಳು, ಮಾರಾಟದ ವ್ಯವಸ್ಥೆ, ಹೆಚ್ಚು ಫಸಲನ್ನು ಪಡೆಯಲು ಕಳೆಗಿಡಗಳ ತಡೆಗಟ್ಟುವಿಕೆ, ಇವುಗಳ ವಿವರಣೆಗಳಿವೆ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಇವೆಲ್ಲವೂ ಮನ್ನಣೆಯನ್ನು ಪಡೆದಿವೆ.

    Art of Living, Siridhanya Mela,

    ಈ ಮೇಳವನ್ನು ಕರ್ನಾಟಕದ ಸನ್ಮಾನ್ಯ ಕೃಷಿ ಮಂತ್ರಿಗಳಾದ ಚಲುವನಾರಾಯಣಸ್ವಾಮಿ ಅವರು ಉದ್ಘಾಟಿಸಿ, ಇತ್ತೀಚಿನ ದಿನಗಳಲ್ಲಿ ಸೂಪರ್ ಫುಡ್​ಳು ಹೇಗೆ ಫ್ಯಾಶನ್ ಆಗಿದೆ ಎಂದು ವಿವರಿಸಿದರು.

    Art of Living, Siridhanya Mela,

    ರೈತರು, ರೈತ ಉತ್ಪಾದಕರ ಸಂಘಗಳು, ಫುಡ್ ಪ್ರಾಸೆಸ್ಸಿಂಗ್ ಸಂಘಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಕೊಳ್ಳುವವರ, ಮಾರಾಟಗಾರರ ವೇದಿಕೆ ಇಲ್ಲಿ ನಿರ್ಮಿತವಾಗಿದೆ. ಪ್ರತಿ ದಿನ 15,000 ಜನರು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಮತ್ತು ಈ ಮೂರು ದಿವಸಗಳ ಮೇಳದಲ್ಲಿ 50,000 ಜನರು ಲಾಭ ಪಡೆದುಕೊಳ್ಳಲಿದ್ದಾರೆ.

    WPL 2024: ಕಳೆದ ಬಾರಿ ಅನ್​ಸೋಲ್ಡ್​ ಆಗಿದ್ದ ಕಶ್ವಿಗೆ ಈ ಬಾರಿ ಬಂಪರ್​: ಕನ್ನಡತಿ ವೃಂದಾಗೂ ಕುಲಾಯಿಸಿದ ಲಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts