ಜಿಲ್ಲೆ

"ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಿ"

Uttara Kannada - Subash Hegde

ಕಾರವಾರ: ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ಎಲ್ಲರ ಸಹಕಾರ ಅಗತ್ಯ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಕೆ.ಸಂತೋಷ ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಹಾಗೂ ಸಂಗಮ ಸೇವಾ ಸಂಸ್ಥೆಯಿಂದ ಇಲ್ಲಿನ ಬಾಲಮಂದಿರ ಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕೃತಿಯನ್ನೂ ದೇವರು ಎಂದು ಪೂಜಿಸುವ ಸಂಸ್ಕೃತಿ ನಮ್ಮದು. ಅದನ್ನು ಸುಸ್ಥಿರವಾಗಿ ಕಾಪಾಡಿಕೊಂಡು ಹೋಗುವುದು ನಮ್ಮ ಧರ್ಮ. ಪ್ರಕೃತಿಯ ಭಾಗವಾಗಿರುವ ನೀರಿನ ಮೂಲಗಳು ಗಣೇಶೋತ್ಸವದ ಕಾರಣಕ್ಕೆ ಕಲುಶಿತವಾಗುವುದನ್ನು ತಡೆಯಬೇಕು ಎಂದರು.

ಇದನ್ನೂ ಓದಿ: ಕಿವೀಸ್​ ಎದುರು ಸರಣಿ ಗೆದ್ದು ವಿಶ್ವಕಪ್​ಗೆ ಸಜ್ಜಾದ ಹಾಲಿ ಚಾಂಪಿಯನ್​ ಇಂಗ್ಲೆಂಡ್
ಉಪನ್ಯಾಸ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ.ಗಣಪತಿ ಹೆಗಡೆ, ಪಿಒಪಿ ಹಾಗೂ ಬಣ್ಣಗಳನ್ನು ಬಳಸಿದ ಮೂರ್ತಿಯನ್ನು ನೇರವಾಗಿ ನೀದಿಗಳಲ್ಲಿ ವಿಸರ್ಜಿಸಿದರೆ ಅದರಿಂದ ಜಲಚರಗಳಿಗೆ ಹಾನಿಯಾಗಬಹುದು. ಜನ, ಜಾನುವಾರುಗಳು ನೀರು ಕುಡಿದರೂ ತೊಂದರೆಯಾಗಬಹುದು. ಹಾಗಾಗಿ ಜೇಡಿ ಮಣ್ಣಿನಿಂದ ನೈಸರ್ಗಿಕ ಬಣ್ಣಗಳನ್ನು ಬಳಸದೇ ತಯಾರಿಸಿದ ಮೂರ್ತಿಗಳು ಪೂಜಿಸಿ ಎಂದು ಕರೆ ನೀಡಿದರು. ಪ್ಲಾಸ್ಟಿಕ್‌ನಿಂದ ತಯಾರಿಸಿ ಅಲಂಕಾರಿಕ ವಸ್ತುಗಳನ್ನು ಬಳಸದೇ ನೈಸರ್ಗಿಕವಾಗಿ ಹಬ್ಬ ಆಚರಿಸಿ ಎಂದು ಕರೆ ನೀಡಿದರು.
ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಅಧ್ಯಕ್ಷತೆ ವಹಿಸಿದ್ದರು. ಸಂಗಮ ಸೇವಾ ಸಂಸ್ಥೆಯ ಮುಖ್ಯಸ್ಥ ರವೀಂದ್ರ ಶೆಟ್ಟಿ ಸ್ವಾಗತಿಸಿದರು. ಸಹಾಯಕ ಶಿಕ್ಷಕಿ ಭಾರತಿ ಐಸಾಕ್, ಕಾರ್ಯಕ್ರಮ ನಿರೂಪಿಸಿದರು. ಅಂಕೋಲಾ ಕೆಎಲ್‌ಇ ಸಂಸ್ಥೆಯ ತಿಮ್ಮಣ್ಣ ಭಟ್ಟ ವಂದಿಸಿದರು.