ಪಡುಬಿದ್ರಿ: ಎರಡು ವರ್ಷಗಳಿಂದ ಸ್ವಚ್ಛ ಸುಂದರವಾಗಿದ್ದ ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿ ನಂದಿಕೂರು ಕೈಗಾರಿಕಾ ಪ್ರದೇಶ ಮುಂಭಾಗದ ರಸ್ತೆ ಬದಿ ಮತ್ತೆ ದುಷ್ಕರ್ಮಿಗಳು ಕಸು ಸುರಿದು ಪರಿಸರ ಹಾನಿ ಮಾಡಲು ಆರಂಭಿಸಿದ್ದಾರೆ.
ಈ ಹಿಂದೆ ಕಸದಿಂದ ತುಂಬಿ ದುರ್ವಾಸನೆಯಿಂದ ಕೂಡಿದ್ದ ಈ ಹೆದ್ದಾರಿ ಇಕ್ಕೆಲಗಳನ್ನು ಪಲಿಮಾರು ಗ್ರಾಪಂ ಸತತ ಪರಿಶ್ರಮದ ಬಳಿಕ ಸ್ವಚ್ಛವಾಗಿರಿಸಿತ್ತು. ಕಸ ಸುರಿಯುವವರ ಬಗ್ಗೆ ನಿಗಾ ವಹಿಸಿತ್ತು. ಇದೀಗ ಕಳೆದ ಕೆಲದಿನಗಳಿಂದ ಈ ಭಾಗದಲ್ಲಿ ಗೋಣಿ ಚೀಲಗಳಲ್ಲಿ ತಂದು ಕಸವನ್ನು ಎಲ್ಲೆಂದರಲ್ಲಿ ಸುರಿಯಲಾಗಿದ್ದು, ದಿನ ನಿತ್ಯ ಸಾವಿರಾರು ಜನ ಸಂಚರಿಸುವ ಪರಿಸರ ಅಸಹ್ಯವಾಗುತ್ತಿದೆ. ಬೀದಿನಾಯಿಗಳ ಹಾವಳಿಗೂ ಕಾರಣವಾಗುತ್ತಿದೆ.