ಜಿಲ್ಲೆ

ಪರಿಸರ ಜಾಗೃತಿ ಕಾರ್ಯಾಗಾರ

ಸೌಮ್ಯ ಆರ್

ಸುಬ್ರಹ್ಮಣ್ಯ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಲ್ಲಮೊಗ್ರು, ಸುಳ್ಯ ವತಿಯಿಂದ ಬಂಗ್ಲೆಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕಾರ್ಯಾಗಾರ, ವನಮಹೋತ್ಸವ ಬುಧವಾರ ನಡೆಯಿತು.

ಸುಬ್ರಹ್ಮಣ್ಯ ವಲಯ ಒಕ್ಕೂಟ ಅಧ್ಯಕ್ಷ ತೀರ್ಥರಾಮ ದೋಣಿಪಳ್ಳ ಉದ್ಘಾಟಿಸಿ, ಗಿಡ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕಿ ಕಮಲಾ ಎ. ಅಧ್ಯಕ್ಷತೆ ವಹಿಸಿದ್ದರು.

ಹಣ್ಣಿನ ಗಿಡಗಳ ವಿತರಣೆ: ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪರಿಸರ ಸಮೃದ್ಧಿ ಸಂಬಂಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಹಣ್ಣಿನ ಗಿಡಗಳನ್ನು ಶಾಲಾ ಮಂತ್ರಿ ಮಂಡಲದ ನಾಯಕರಿಗೆ ವಿತರಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಕೃಷಿ ಅಧಿಕಾರಿ ರಮೇಶ್, ಕೊಲ್ಲಮೊಗ್ರು ಗ್ರಾಪಂ ಅಧ್ಯಕ್ಷೆ ಮೋಹಿನಿ ಕಟ್ಟ, ಉಪಾಧ್ಯಕ್ಷ ಮಾಧವ ಚಾಂತಾಳ, ಸುಬ್ರಹ್ಮಣ್ಯ ವಲಯ ಜನಜಾಗೃತಿ ವೇದಿಕೆ, ಎಸ್‌ಡಿಎಂಸಿ ಅಧ್ಯಕ್ಷೆ ಜಯಶ್ರೀ ಚಾಂತಾಳ, ಶಾಲಾ ಹಳೇ ವಿದ್ಯಾರ್ಥಿ ಸಂಘ, ಚಾಂತಾಳ ಒಕ್ಕೂಟ ಉಪಾಧ್ಯಕ್ಷ ಚಂದ್ರಶೇಖರ ಕೋನಡ್ಕ, ತಾಲೂಕು ಭಜನಾ ಪರಿಷತ್ ಸಂಯೋಜಕ ಸತೀಶ್ ಟಿ.ಎನ್., ಕೊಲ್ಲಮೊಗ್ರು ಬಿ ಒಕ್ಕೂಟ ಅಧ್ಯಕ್ಷ ಹೇಮಂತ್ ದೊಲನಮನೆ, ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕ ಬಾಲಕೃಷ್ಣ ಗೌಡ, ಕೊಲ್ಲಮೊಗ್ರು ಸೇವಾ ಪ್ರತಿನಿಧಿ ಸಾವಿತ್ರಿ ನಿಡುಬೆ, ಪಾಲಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.