ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೆರೆಯಲ್ಲಿ ಹವಮಾನ ಬದಲಾವಣೆ ಪರಿಣಾಮ ತಡೆಗೆ ಜಾಗೃತಿ ಅಭಿಯಾನ ನಡೆಯಿತು. ಗ್ರಾಪಂ ಸದಸ್ಯರಾದ ನೀಲನಗೌಡ್ರು ಮಹೇಶ್ವರಗೌಡ, ಕುಂಟೂರು ನಾಗರಾಜ, ಟಿ.ಜಿ.ಶ್ರೀಧರ, ಲಂಗಟದರ ಗಿರಿಜಮ್ಮ, ಅಟವಾಳಗಿ ನಿರ್ಮಲ, ಸಂಪನ್ಮೂಲ ವ್ಯಕ್ತಿ ಮಮತಾ ತಳವಾರ ಇದ್ದರು. 
ಜಿಲ್ಲೆ

ಪರಿಸರ ಉಳಿಸಿಕೊಳ್ಳುವ ಯತ್ನ ನಡೆಯಲಿ

ಹಗರಿಬೊಮ್ಮನಹಳ್ಳಿ: ತಾಲೂಕಿನ ಮೋರಗೆರೆಯಲ್ಲಿ ಆಸರೆ ಮತ್ತು ಗ್ರಾಮ ವಿಕಾಸ, ಗ್ರಾಪಂ, ತಾಪಂನಿಂದ ಹವಮಾನ ಬದಲಾವಣೆ ಪರಿಣಾಮ ತಡೆಗೆ ಜಾಗೃತಿ ಅಭಿಯಾನ ಕಾರ್ಯಕ್ರಮ ಶನಿವಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾದ ಮಮತಾ ತಳವಾರ ಮಾತನಾಡಿ, ಪರಿಸರ ನಾಶದಿಂದ ಹವಮಾನದಲ್ಲಿ ಬಾರಿ ಬದಲಾವಣೆಯಾಗಿದೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತಿದ್ದು, ಇದನ್ನು ತಡೆಯುವಲ್ಲಿ ಪ್ರತಿಯೊಬ್ಬರ ಕರ್ತವ್ಯ ಇದೆ. ಆದ್ದರಿಂದ ಜಾಗೃತರಾಗಿ ಪರಿಸರ ಉಳಿಸಿಕೊಳ್ಳುವ ಯತ್ನ ಮಾಡೋಣವೆಂದರು.

ಗ್ರಾ.ಪಂ.ಸದಸ್ಯರಾದ ನೀಲನಗೌಡ್ರು ಮಹೇಶ್ವರಗೌಡ, ಕುಂಟೂರು ನಾಗರಾಜ, ಟಿ.ಜಿ.ಶ್ರೀಧರ, ಲಂಗಟದರ ಗಿರಿಜಮ್ಮ, ಅಟವಾಳಗಿ ನಿರ್ಮಲ, ವಿಎಸ್‌ಎಸ್‌ಎನ್ ಅಧ್ಯಕ್ಷ ಕುಂಟೂರು ಸೋಮಶೇಖರ, ಹಾಲು ಒಕ್ಕೂಟ ನಿರ್ದೇಶಕ ಹಳ್ಳಿ ಮಲ್ಲಿಕಾರ್ಜುನ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶೋಭಾ ಜೈನ್, ಸಂಪನ್ಮೂಲ ವ್ಯಕ್ತಿ ಲೋಕೇಶ ಹೊಳಗುಂದಿ ಇತರರಿದ್ದರು.