ಮುದಗಲ್‌ನಲ್ಲಿ ಏರ್ಪಡಿಸಿದ್ದ ಹಾಲುಮತ ಧರ್ಮ, ಪರಿಸರ ಜಾಗೃತಿ ಕಾರ್ಯಕ್ರಮವನ್ನು ತಿಂಥಣಿ ಬ್ರಿಡ್ಜ್ ಕನಕ ಗುರು ಪೀಠದ ಸಿದ್ಧರಾಮಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಸಿದ್ದಯ್ಯಸ್ವಾಮಿ, ಗುರು ಬೀರಲಿಂಗ ದೇವರು, ಸಣ್ಣ ಸಿದ್ದಯ್ಯ ಇತರರಿದ್ದರು. 
ಜಿಲ್ಲೆ

ಪರಿಸರ ಜಾಗೃತಿಗೆ ಕೈ ಜೋಡಿಸಿ

ಮುದಗಲ್: ಹಾಲುಮತ ಸಮಾಜದ ಜನರು ಸರ್ವರೊಂದಿಗೆ ಸಮಾನತೆ, ಹೊಂದಾಣಿಕೆಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ತಿಂಥಣಿ ಬ್ರಿಡ್ಜ್‌ನ ಕನಕಗುರು ಪೀಠಾಧಿಕಾರಿ ಸಿದ್ಧರಾಮಾನಂದಪುರಿ ಸ್ವಾಮೀಜಿ ಹೇಳಿದರು.

ಪಟ್ಟಣದ ಮೇಗಳಪೇಟೆ ಜ್ಞಾನಪ್ಪಯ್ಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಹಾಲುಮತ ಧರ್ಮ, ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಹಾಲುಮತ ಕೃಷಿಕ ಸಮಾಜವಾಗಿದ್ದು, ಖುದ್ದು ಪರಿಸರ ಸಂರಕ್ಷಣೆ ಮಾಡುವ ಹಾಗೂ ಸಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ.

ಅದಕ್ಕಾಗಿ ಪೀಠ ಶ್ರಾವಣ ಮಾಸದ ಪರ್ಯಂತ ಪೀಠದ ವ್ಯಾಪ್ತಿಯಲ್ಲಿ ಸಂಚರಿಸಿ ಪರಿಸರ ಜಾಗೃತಿ ಮೂಡಿಸಲಾಗುತ್ತಿದ್ದು, ಸರ್ವರೂ ಕೈ ಜೋಡಿಸುವಂತೆ ಕರೆ ನೀಡಿದರು. ಪ್ರಮುಖರಾದ ಸಣ್ಣ ಸಿದ್ದಯ್ಯಸ್ವಾಮಿ, ಪರಮಾನಂದ ಹೊಳ್ಯಾಚಿ, ಶಿವನಾಗಪ್ಪ ಬಡಕುರ, ಗ್ಯಾನಪ್ಪ ಹೊಳ್ಯಾಚಿ, ಗ್ಯಾನಯ್ಯ ಬಾವಿಕಟ್ಟಿ ಇತರರಿದ್ದರು.