ಪರಿಸರ ಕಾಳಜಿಯೊಂದಿಗೆ ಗಣೇಶೋತ್ಸವ ಆಚರಿಸುವಂತೆ ಸಲಹೆ

ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜನೋತ್ಸವ ಸಮಿತಿ ಸಭೆಯಲ್ಲಿ ಎ.ಎಸ್.ಪೊನ್ನಣ್ಣ, ಶಬರೀಶ್ ಶೆಟ್ಟಿ , ಅನೂಪ್ ಮಾದಪ್ಪ, ನಾಚಪ್ಪ, ಫಸಿಹಾ ತಬುಸುಮ್ ಇದ್ದರು.
ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜನೋತ್ಸವ ಸಮಿತಿ ಸಭೆಯಲ್ಲಿ ಎ.ಎಸ್.ಪೊನ್ನಣ್ಣ, ಶಬರೀಶ್ ಶೆಟ್ಟಿ , ಅನೂಪ್ ಮಾದಪ್ಪ, ನಾಚಪ್ಪ, ಫಸಿಹಾ ತಬುಸುಮ್ ಇದ್ದರು.
Published on

ವಿರಾಜಪೇಟೆ: ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಐತಿಹಾಸಿಕ ಜನೋತ್ಸವ ಸಮಿತಿ ಸಭೆಯಲ್ಲಿ ಗಣೇಶೋತ್ಸವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ, ಪರಿಸರ ಕಾಳಜಿಯೊಂದಿಗೆ ಗಣೇಶೋತ್ಸವವನ್ನು ಆಚರಿಸಬೇಕು. ಅಲ್ಲದೆ ಪ್ರಕೃತಿಗೆ ಹಾನಿಕಾರವಾದ, ಪ್ರಾಣಿ-ಪಕ್ಷಿಗಳು ಹಾಗೂ ಪರಿಸರಕ್ಕೆ ಮಾರಕವಾಗಬಹುದಾದ ಯಾವುದೇ ಬಣ್ಣವಾಗಲಿ, ಪೇಪರ್ ವಸ್ತುಗಳನ್ನಾಗಲಿ ಬಳಸದೆ ಗಣೇಶೋತ್ಸವವನ್ನು ಆಚರಿಸಿ ಎಂದು ಸಲಹೆ ನೀಡಿದರು.

ನಾಡಿನ ಪರಂಪರೆ, ಸಂಸ್ಕೃತಿ ಹಾಗೂ ಕಲೆಯನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವ ವಿರಾಜಪೇಟೆ ನಗರ ಐತಿಹಾಸಿಕ ಜನೋತ್ಸವ ಸಮಿತಿಯ ಕೆಲಸ ಕಾರ್ಯಗಳು ಮುಂದೆಯೂ ಮುಂದುವರಿಯಬೇಕು. ಜತೆಗೆ ಮತ್ತಷ್ಟು ಆಯೋಜಿಸುವ ಮೂಲಕ ಅದ್ದೂರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದ ಅವರು, ಇದಕ್ಕಾಗಿ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಮಿತಿ ಕಾರ್ಯಾಧ್ಯಕ್ಷ ಶಬರಿಷ್ ಶೆಟ್ಟಿ, ತಹಸೀಲ್ದಾರ್ ಪ್ರವೀಣ್, ಪುರಸಭೆ ಮುಖ್ಯಾಅಧಿಕಾರಿ ನಾಚಪ್ಪ, ಉಪಾಧ್ಯಕ್ಷೆ ಫಸಿಯಾ ತಬ್ಸುಂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net