ಸರ್.ಎಂ.ವಿಶ್ವೇಶ್ವರಯ್ಯನವರ 165ನೇ ಜನ್ಮ ದಿನದ ಅಂಗವಾಗಿ ಇಂಜಿನಿಯರ್ ದಿನವನ್ನು ಎ.ಜಿ ಅಸೋಸಿಯೇಟ್ಸ್‌ನ ಇಂಜಿನಿಯರ್ ಯೋಗೀಶ್ ಚಂದ್ರ ಧಾರಾ ಉದ್ಘಾಟಿಸಿದರು.  
ಜಿಲ್ಲೆ

ಬಂಟಕಲ್ ಕಾಲೇಜಿನಲ್ಲಿ ಇಂಜಿನಿಯರ್ ದಿನಾಚರಣೆ

ಇಂದಿರಾ ಎನ್ ಕೆ

ಶಿರ್ವ: ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಎಸ್‌ಟಿಇ ವಿದ್ಯಾರ್ಥಿ ಘಟಕ ವತಿಯಿಂದ ಸರ್.ಎಂ.ವಿಶ್ವೇಶ್ವರಯ್ಯನವರ 165ನೇ ಜನ್ಮದಿನದ ಅಂಗವಾಗಿ ಇಂಜಿನಿಯರ್ ದಿನ ಆಚರಿಸಲಾಯಿತು.

ಎ.ಜಿ ಅಸೋಸಿಯೇಟ್ಸ್‌ನ ಇಂಜಿನಿಯರ್ ಯೋಗೀಶ್ ಚಂದ್ರ ಧಾರಾ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯನವರು ನಮ್ಮ ದೇಶಕ್ಕೆ ನೀಡಿದ ಕೊಡುಗೆ ಬಗ್ಗೆ ಸ್ಮರಿಸಿದರು. ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ದಿನದ ಮಹತ್ವದ ಬಗ್ಗೆ ತಿಳಿಸಿದರು. ಡೀನ್‌ಗಳು, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿ ಚಿತ್ಕಲಾ ಪ್ರಾರ್ಥಿಸಿ, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕಿ ಅಕ್ಷತಾ ರಾವ್ ಕಾರ್ಯಕ್ರಮ ನಿರೂಪಿಸಿದರು.