ಜಿಲ್ಲೆ

ಸೇವಾ ಚಟುವಟಿಕೆಗಳಿಗೆ ಪ್ರೋತ್ಸಾಹ: ಕಿಲ್ಪಾಡಿ ಗ್ರಾ.ಪಂ. ಅಧ್ಯಕ್ಷ ವಿಕಾಸ್ ಶೆಟ್ಟಿ ಮೆಚ್ಚುಗೆ

Avinash R

ಮೂಲ್ಕಿ: ಗ್ರಾಮೀಣ ಪ್ರದೇಶದಲ್ಲಿ ಸಂಟನಾತ್ಮಕ ಚಟುವಟಿಕೆಗಳ ಮೂಲಕ ಶ್ರೀ ಕುವಾರಸ್ವಾಮಿ ಯುವಕ ಮಂಡಲದ ಸಾವಾಜಿಕ, ಧಾರ್ಮಿಕ ಹಾಗೂ ಶಿಕ್ಷಣ ಚಟುವಟಿಕೆಗಳಿಗೆ ಪ್ರೋತ್ಸಾಹ ಅಭಿನಂದನೀಯ ಎಂದು ಕಿಲ್ಪಾಡಿ ಗ್ರಾಪಂ ಅಧ್ಯಕ್ಷ ವಿಕಾಸ್ ಶೆಟ್ಟಿ ಹೇಳಿದರು.

ಕಿಲ್ಪಾಡಿ ಶ್ರೀ ಕುವಾರಸ್ವಾಮಿ ಯುವಕ ಹಾಗೂ ಮಹಿಳಾ ಮಂಡಲದ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮದಲ್ಲಿ ಅವರು ವಾತನಾಡಿದರು.

ಸಾಧಕರ ನೆಲೆಯಲ್ಲಿ ನಿವೃತ್ತ ಸುಬೇದಾರ್ ಮೇಜರ್ ನಾರಾಯಣ ರೈ ಕುಬೆವೂರು ಅವರನ್ನು ಗೌರವಿಸಲಾಯಿತು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುವಾನ ವಿತರಿಸಲಾಯಿತು.

ಕುವಾರಸ್ವಾಮಿ ಯುವಕ ಮಂಡಲದ ಅಧ್ಯಕ್ಷ ಸತೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಮಯ್ಯ, ಸಂಸ್ಥೆಯ ಗೌರವಾಧ್ಯಕ್ಷ ಗೋಪಿನಾಥ ಪಡಂಗ, ಮಹಿಳಾ ಮಂಡಳದ ಅಧ್ಯಕ್ಷೆ ಲೋಲಾಕ್ಷಿ, ಯುವಕ ಮಂಡಲದ ಪದಾಧಿಕಾರಿಗಳಾದ ಮನೋಹರ್, ವಿಜಯ್ ಸಾಲ್ಯಾನ್, ಸುಧೀರ್, ಸಂತೋಷ್ ಮತ್ತಿತರರಿದ್ದರು.

ಗೋಪಿನಾಥ ಪಡಂಗ ಸ್ವಾಗತಿಸಿದರು. ಶ್ರದ್ಧಾ ಪ್ರಾರ್ಥಿಸಿದರು. ವಾಣಿ ವಂದಿಸಿದರು. ಶ್ರೇಯಾ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.