ಮಸ್ಕಿಯಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಶಾಸಕ ಆರ್.ಬಸನಗೌಡ ತುರ್ವಿಹಾಳ ಉದ್ಘಾಟಿಸಿದರು. ತಾಲೂಕು ವೈದ್ಯಾಧಿಕಾರಿ ಅಮರೇಶ ಪಾಟೀಲ್, ನೌಕರರ ಸಂಘದ ತಾಲೂಕು ಅಧ್ಯಕ್ಷ ಪಂಪಾಪತಿ ಹೂಗಾರ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಮಹಿಬೂಬಸಾಬ ಮುದ್ದಾಪುರ, ಗ್ರೇಡ್-2 ತಹಸೀಲ್ದಾರ್ ಆಶೋಕ, ಮಸ್ಕಿ ನಾಲ ಯೋಜನೆಯ ಅಧಿಕಾರಿಗಳಾದ ದಾವುದ್, ಡಾ.ವಿನೋದ ಅಂಗಡಿ ಇತರರಿದ್ದರು. 
ಜಿಲ್ಲೆ

ನೌಕರರಲ್ಲಿ ಆರೋಗ್ಯದ ಕಾಳಜಿ ಇರಲಿ

ಗಾಯತ್ರಿ ಮಾಲಿಪಾಟೀಲ್

ಮಸ್ಕಿ: ಸರ್ಕಾರಿ ನೌಕರರು ಒತ್ತಡದ ಜೀವನ ನಡೆಸುತ್ತಿದ್ದು, ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘ, ವೈದೇಹಿ ಆಸ್ಪತ್ರೆ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ಕುಟುಂಬಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ನೌಕರರು ಒತ್ತಡದಲ್ಲಿ ಕಾರ್ಯ ನಿರ್ವಹಿಸುವುದನ್ನು ಗಮನಿಸಿರುವೆ. ಅಭಿವೃದ್ಧಿಗೆ ನೌಕರರ ಪಾತ್ರ ಮುಖ್ಯವಾಗಿದೆ. ಹಾಗಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷೃ ಬೇಡ ಎಂದರು.

ವೈದೇಹಿ ಆಸ್ಪತ್ರೆ ಸಂರ್ಪಕಾಧಿಕಾರಿ ಮಲ್ಲಿಕಾರ್ಜುನ ಹಚ್ಚೊಳ್ಳಿ ಅವರು ವಿವಿಧ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡುವ ಕುರಿತು ಮಾಹಿತಿ ನೀಡಿದರು. ಸರ್ಕಾರಿ ನೌಕರರು ಹಾಗೂ ಕುಟುಂಬಸ್ಥರು ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ನಂತರ ಇತ್ತೀಚೆಗೆ ನಿಧನ ಸರ್ಕಾರಿ ನೌಕರರ ಸಂಘದ ನಿಕಟ ಪೂರ್ವ ತಾಲೂಕು ಅಧ್ಯಕ್ಷ ಶಂಕರಗೌಡ ಕರಡಕಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ತಾಲೂಕು ವೈದ್ಯಾಧಿಕಾರಿ ಅಮರೇಶ ಪಾಟೀಲ್, ನೌಕರರ ಸಂಘದ ತಾಲೂಕು ಅಧ್ಯಕ್ಷ ಪಂಪಾಪತಿ ಹೂಗಾರ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಮಹಿಬೂಬಸಾಬ ಮುದ್ದಾಪುರ, ಗ್ರೇಡ್-2 ತಹಸೀಲ್ದಾರ್ ಆಶೋಕ, ಮಸ್ಕಿ ನಾಲ ಯೋಜನೆಯ ಅಧಿಕಾರಿಗಳಾದ ದಾವುದ್, ಡಾ.ವಿನೋದ ಅಂಗಡಿ, ಬಿ.ಕೆ.ಸುನಿತಾ, ಗುರುಮೂರ್ತಿ, ಗ್ರಾಮ ಅಧಿಕಾರಿ ರಾಘವೇಂದ್ರ, ಉಪನ್ಯಾಸಕ ಮಹಾಂತೇಶ ಮಸ್ಕಿ, ಶಿಕ್ಷಕ ಮಂಜುನಾಥ, ಪ್ರಮುಖರಾದ ಬಸನಗೌಡ ಪೊಲೀಸ್ ಪಾಟೀಲ, ಶಿವರಾಜ ಇತ್ಲಿ ಇತರರಿದ್ದರು.