ಜಿಲ್ಲೆ

ಕಾರಿನಲ್ಲಿ ಆನೆದಂತ ಸಾಗಣೆ ಮಾಡುತ್ತಿದ್ದ ನಾಲ್ವರ ಬಂಧನ

theerthaswamy

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ‌ ಹ್ಯಾಂಡ್ ಪೋಸ್ಟ್ ಬಳಿ ಕಾರಿನಲ್ಲಿ ಆನೆದಂತ ಸಾಗಿಸುತ್ತಿದ್ದ ನಾಲ್ವರು ಯುವಕರ ತಂಡವನ್ನು ಅರಣ್ಯ ಸಂಚಾರಿದಳ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಮೂಲದ ಪ್ರೀತಮ್ (31), ಜಗದೀಶ್ (21), ಪುನೀತ್ (28), ಹೇಮಂತ್ (26) ಬಂಧಿತ ಆರೋಪಿಗಳು. ಆನೆದಂತವನ್ನು ಮಾರಾಟ‌ ಮಾಡುವ ಉದ್ದೇಶದಿಂದ ಕಾರಿನಲ್ಲಿ ಸಾಗಿಸಲಾಗುತ್ತದೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಪಿಎಸ್​​ಐ ಆನಂದ್ ಕುಮಾರ್ ತಂಡ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಬಂದ ಕಾರೊಂದನ್ನು ಹಿಡಿದು ತಪಾಸಣೆ ನಡೆಸಿದ್ದಾರೆ.

ಈ ವೇಳೆ ಕಾರಿನಲ್ಲಿದ್ದವರ ಸಂಶಯಾಸ್ಪದ ನಡವಳಿಕೆ ಕಂಡ ಪೊಲೀಸರು ಸೂಕ್ಷ್ಮವಾಗಿ ತಪಾಸಣೆ ಮಾಡಿದ್ದರು. ಆಗ ಎರಡು ಉದ್ದನೆಯ ಆನೆ ದಂತ ಸಾಗಿಸುತ್ತಿರುವುದು ತಿಳಿದುಬಂದಿದೆ.
ಆನೆದಂತಗಳು ಸುಮಾರು 15 ಕೆಜಿ 900 ಗ್ರಾಂ ತೂಕವಿದ್ದು. ಆರೋಪಿಗಳನ್ನು ಕಾರು ಸಮೇತ ವಶಕ್ಕೆ ಪಡೆದುಕೊಳ್ಳಲಾಗಿದೆ.

ದಾಳಿಯಲ್ಲಿ ಸಿಬ್ಬಂದಿ ಶಂಕರ್, ಸ್ವಾಮಿ, ಟಕ್ಕಿ ವುಲ್ಲಾ, ರಾಮಚಂದ್ರ, ಸ್ವಾಮಿ, ಪ್ರಭಾಕರ್ ಇದ್ದರು.