ರಾಮನಗರ: ಒಂದು ವಾರದ ಅವಧಿಯಲ್ಲೇ ಇಬ್ಬರ ಜೀವ ಬಲಿ ಪಡೆದಿದ್ದ 45 ವರ್ಷದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮೂರು ದಿನಗಳ ವಿಶೇಷ ಕಾರ್ಯಾಚರಣೆ ನಡೆಸಿ ಗುರುವಾರ ಸೆರೆ ಹಿಡಿದಿದ್ಧಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶದ ಕಾಡನಕುಪ್ಪೆ ಪ್ರದೇಶದಲ್ಲಿ ಒಂಟಿ ಸಲಗ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಖೆಡ್ಡಾಕ್ಕೆ ಕೆಡವಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ, ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಮತ್ತು ತಂಡ ಪುಂಡಾನೆಯ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದು, ಸತತ ಐದು ತಾಸುಗಲ ಕಾರ್ಯಾಚರಣೆ ಬಳಿಕ ಅರವಳಿಕೆಯನ್ನು ನೀಡಿ ಒಂಟಿ ಸಲಗವನ್ನು ಸರೆ ಹಿಡಯಲಾಗಿದೆ.
ಸೆರೆ ಹಿಡಿದ ಬಳಿಕ ಆನೆ ಲಾರಿ ಹತ್ತದೆ ಕ್ರೇನ್ನನ್ನೇ ಅಳ್ಳಾಡಿಸಿ ನೆಲಕ್ಕೆ ಉರುಳಿಸಿತ್ತು. ಇದನ್ನು ಕಂಡು ಗಾಬರಿಯಾದ ನೆರದಿದ್ದ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಕೊಂಬಿಂಗ್ಗಾಗಿ ಬಂದಿದ್ದ ಮತ್ತಿಗೋಡು ಆನೆ ಶಿಬಿರದಿಂದ ಕೊಂಬಿಂಗ್ಗಾಗಿ ಬಂದಿದ್ದ ಅಭಿಮನ್ಯು, ಅರ್ಜುನ, ಭೀಮ, ಮಹೇಂದ್ರ, ಶ್ರೀಕಂಠನ ನೆರವಿನಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಪುಂಡಾನೆಯನ್ನು ಲಾರಿ ಹತ್ತಿಸಿದ್ದಾರೆ.
ಕಾಡಾನೆ ದಾಳಿಗೆ ಮೇ 30ರಂದು ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮದ ರೈತ ಕಾಳಯ್ಯ, ಜೂನ್ 30ರಂದು ಚನ್ನಪಟ್ಟಣದ ವಿರೂಪಸಂದ್ರದಲ್ಲಿ ವೀರಯ್ಯ ಎಂಬುವವರು ಮೃತಪಟ್ಟಿದ್ದರು.